ಏಕಕಾಲದಲ್ಲಿ ಅಕ್ಕತಂಗಿಯರನ್ನೇ ಮದುವೆಯಾದ ‘ಉಮಾಪತಿ’ ! ಹೀಗೊಂದು ವಿಚಿತ್ರ ಬಹುಪತ್ನಿತ್ವ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋಲಾರ: ಅಕ್ಕತಂಗಿಯರನ್ನು ಏಕಕಾಲದಲ್ಲಿ ವರಿಸಿದ ವಿಚಿತ್ರ ಪ್ರಸಂಗವೊಂದು ರಾಜ್ಯದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಸುಪ್ರಿಯಾ ಹಾಗೂ ಲಲಿತ ಎಂಬವರೇ ವಧುಗಳು. ಅದೇ ತಾಲೂಕಿನ ಉಮಾಪತಿ ಎಂಬವನೇ ಮಧುಮಗ. ಮದುವೆಯ ಆಮಂತ್ರಣ ಪತ್ರಿಕೆಯ ಪ್ರತಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದೆ.

ವಧುಗಳ ತಂದೆಯಾದ ನಾಗರಾಜಪ್ಪ ಎಂಬವರು ಸಹಾ ಇದೇ ರೀತಿ ಅಕ್ಕತಂಗಿಯರನ್ನೇ ವರಿಸಿರುವುದೆಂದು ಹೇಳಲಾಗಿದೆ. ಹಾಗಾಗಿ ಕುಟುಂಬದಲ್ಲಿ ರೀತಿಯ ಮದುವೆ ನಡೆಯುತ್ತಿರುವುದು ಇದೇ ಮೊದಲಲ್ಲ.

ಇಬ್ಬರಲ್ಲಿ ಹಿರಿಯವಳಾದ ಸುಪ್ರಿಯಾ ಎಂಬವರು ಹುಟ್ಟು ಮೂಗಿಯಾಗಿದ್ದು, ಇದು ಕೂಡಾ ಇಬ್ಬರನ್ನೂ ಒಂದೇ ಬಾರಿಗೆ ಮದುವೆಯಾಗಲು ಕಾರಣವೆಂದು ಸಮಜಾಯಿಷಿ ನೀಡಿದ ವರ ಉಮಾಪತಿ, ಆರ್ಥಿಕವಾಗಿ ಅಷ್ಟೊಂದು ಸಧೃಢವಲ್ಲದಿದ್ದರೂ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುವ ಭರವಸೆ ವ್ಯಕ್ತಪಡಿಸುತ್ತಾನೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು