ದೋಹಾದಲ್ಲಿ ನವೆಂಬರ್ 18 ರಿಂದ ಅಂತರಾಷ್ಟ್ರೀಯ ಚಲನಚಿತ್ರ ಮೇಳ | ಹತ್ತು ಹಲವು ವಿಶೇಷತೆಗಳು

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ-ಕತರ್(10-11-2020): ದೋಹಾ ಫಿಲ್ಮ್ ಇನ್ಸ್ಟಿಟ್ಯೂಟ್ ವತಿಯಿಂದ ಎಂಟನೇ ಅಜ್ಯಾಲ್ ಚಲನಚಿತ್ರ ಮೇಳ ನವೆಂಬರ್ 18 ರಿಂದ 23ರ ವರೆಗೆ ನಡೆಯಲಿದೆ. ಇರಾನ್ ನಿರ್ದೇಶಕ ಮಜೀದ್ ಮಜೀದಿಯ ‘ಸನ್ ಚಿಲ್ಡ್ರನ್’ ಪ್ರದರ್ಶನದೊಂದಿಗೆ ಇದು ಉದ್ಘಾಟನೆಯಾಗಲಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ.

ಸನ್ ಚಿಲ್ಡ್ರನ್ ಚಿತ್ರವು ವೆನಿಸ್ ಚಲನಚಿತ್ರ ಮೇಳದಲ್ಲೂ ಮೊತ್ತ ಮೊದಲು ಪ್ರದರ್ಶನ ಕಂಡ ಚಿತ್ರವಾಗಿತ್ತು. ಬಾಲ ಕಾರ್ಮಿಕ ಪದ್ಧತಿ ಇದರ ಕಥಾವಸ್ತುವಾಗಿದೆ. ಮಕ್ಕಳಲ್ಲಿರುವ ಪ್ರತಿಭೆ, ಸಾಮರ್ಥ್ಯ ಮತ್ತು ಸಕಾರಾತ್ಮಕತೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಇದು ಶಾಶ್ವತ ಸಾಮಾಜಿಕ ಪರಿವರ್ತನೆಗೆ ಕಾರಣೀಭೂತವಾಗಲಿದ್ದು, ಇದರಿಂದ ಸಂತುಲಿತ ತಲೆಮಾರಿನ ನಿರ್ಮಾಣ ಸಾಧ್ಯ ಎನ್ನುವ ಸಂದೇಶ ನೀಡುತ್ತದೆ.

ಹೈಬ್ರೀಡ್ ಫಾರ್ಮೇಟಿನಲ್ಲಿ ನಡೆಯುವ ಮೊತ್ತಮೊದಲ ಚಲನಚಿತ್ರ ಮೇಳ ಇದಾಗಿದ್ದು, 46 ದೇಶಗಳಿಂದ ಸುಮಾರು 80 ಚಿತ್ರಗಳು ಇಲ್ಲಿ ತೆರೆಯ ಮೇಲೆ ಕಾಣಲಿವೆ. 22 ಫ್ಯೂಚರ್ ಚಿತ್ರಗಳು, 50 ಕಿರುಚಿತ್ರಗಳು, ಅರಬ್ ಚಲನಚಿತ್ರ ನಿರ್ದೇಶಕರ 31 ಚಿತ್ರಗಳು, ಅದೇ ರೀತಿ ಮಹಿಳಾ ನಿರ್ದೇಶಕರ ಸುಮಾರು 30 ಚಿತ್ರಗಳು ಇಲ್ಲಿ ವೀಕ್ಷಣೆ ಮಾಡಲು ಸಾಧ್ಯವಾಗಲಿದೆ.

ಚಲನಚಿತ್ರ ಪ್ರದರ್ಶನಕ್ಕೆ ಹೊರತಾಗಿ, ಚರ್ಚೆ, ಸಂವಾದ ಇತ್ಯಾದಿ ಕಾರ್ಯಕ್ರಮಗಳೂ ಜರುಗಲಿದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ, ವಿಭಿನ್ನ ಶೈಲಿಯಲ್ಲಿ ನಡೆಯಲಿದ್ದು, ಆರೋಗ್ಯ ಮಾರ್ಗಸೂಚಿಗಳು ಸರಿಯಾದ ರೀತಿಯಲ್ಲಿ ಪಾಲನೆಯಾಗುವ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ದೋಹಾ ಫೆಸ್ಟಿವಲ್ ಸಿಟಿಯ ವೋಕ್ಸ್ ಥಿಯೇಟರಿನಲ್ಲಿ ಚಿತ್ರಗಳು ಪ್ರದರ್ಶನಗೊಳ್ಳುವುದಲ್ಲದೇ, ಇದರ ಆನ್ಲೈನ್ ಸ್ಟ್ರೀಮಿಂಗ್ ಕೂಡಾ ಇರಲಿದೆ. ಆ ಮೂಲಕ ಹೆಚ್ಚು ವೀಕ್ಷಕರನ್ನು ತಲುಪುವ ಗುರಿಯಿರಿಸಲಾಗಿದೆ. ಕತರ್ ಟೂರಿಸಮ್ ಕೌನ್ಸಿಲ್ ವತಿಯಿಂದ ಕಾರಿನೊಳಗೆ ಕೂತು ವೀಕ್ಷಿಸುವ ‘ಡ್ರೈವಿಂಗ್ ಸಿನಿಮಾ’ ವ್ಯವಸ್ಥೆಯೂ ಲುಸೈಲ್ ಸಿಟಿಯಲ್ಲಿ ಲಭ್ಯವಾಗಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು