ಬಿಹಾರ (19-11-2020): ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿ ಬಿಹಾರದ ಶಿಕ್ಷಣ ಸಚಿವ ಮೆವಾಲಾಲ್ ಚೌಧರಿ ಟೀಕೆಗೆ ಗುರಿಯಾಗಿದ್ದಾರೆ. ಈ ವಿಡಿಯೋ ಹಳೆಯದಾಗಿದ್ದು, ಬಿಹಾರದಲ್ಲಿ ನೂತನ ಸರಕಾರ ರಚನೆಯಾಗಿ ಮೆವಾಲಾಲ್ ಚೌಧರಿ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ವಿಡಿಯೋ ಸಕತ್ ವೈರಲ್ ಆಗಿದೆ.
ರಾಷ್ಟ್ರಗೀತೆಯಲ್ಲಿ ಮೆವಾಲಾಲ್ ಚೌಧರಿ ಪಂಜಾಬ್ ವಸಂತ್ ಗುಜರಾತ ಮರಾಠಾ ಎಂದು ಹಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಿಕ್ಷಣ ಮಂತ್ರಿಯೇ ಈ ರೀತಿ ಆದ್ರೆ ಇನ್ನು ಮಕ್ಕಳ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
ವೈರಲ್ ವಿಡಿಯೋವನ್ನು ಆರ್ಜೆಡಿ ಪೋಸ್ಟ್ ಮಾಡಿದ್ದು, 7 ಭ್ರಷ್ಟಾಚಾರ ಪ್ರಕರಣಗಳ ಆರೋಪ ಹೊತ್ತಿರುವ ಮೆವಾಲಾಲ್ಗೆ ರಾಷ್ಟ್ರಗೀತೆಯೇ ಗೊತ್ತಿಲ್ಲ ಎಂದು ಟೀಕೆ ಮಾಡಿದೆ.
भ्रष्टाचार के अनेक मामलों के आरोपी बिहार के शिक्षा मंत्री मेवालाल चौधरी को राष्ट्रगान भी नहीं आता।
नीतीश कुमार जी शर्म बची है क्या? अंतरात्मा कहाँ डुबा दी? pic.twitter.com/vHYZ8oRUVZ
— Rashtriya Janata Dal (@RJDforIndia) November 18, 2020