ತಿರುವನಂತಪುರ (03-12-2020): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ರಾಷ್ಟ್ರೀಯ ಅಧ್ಯಕ್ಷ ಒಎಂಎ ಸಲಾಮ್, ರಾಷ್ಟ್ರೀಯ ಕಾರ್ಯದರ್ಶಿ ನಸರುದ್ದೀನ್, ಅನೀಸ್ ಅಹ್ಮದ್ ಅವರಿಗೆ ಸೇರಿದ ವಿವಿಧೆಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೇರಳದ ಮಲಪ್ಪುರ, ತಿರುವನಂತಪುರಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಾರಿ ನಿರ್ದೇಶನಾಲಯದ ದಾಳಿಗೆ ಪ್ರತಿಕ್ರಿಯಿಸಿದ ಸಲಾಮ್, ರೈತರ ಪ್ರತಿಭಟನೆಯಿಂದ ದೇಶದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಿದು. ನ್ಯಾಯಕ್ಕಾಗಿ ಧ್ವನಿ ಏರಿಸುವ ನಮ್ಮ ಪ್ರವೃತ್ತಿಯನ್ನು ಈ ದಾಳಿಗಳು ತಡೆಯಲಾರವು. ಸರ್ಕಾರಿ ಇಲಾಖೆಗಳ ದುರ್ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ.