ಮಣಿಪುರ(21-11-2020): ಮಣಿಪುರದಲ್ಲಿ ಸರಣಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.8 ಮತ್ತು 4.0 ತೀವ್ರತೆಯ ಎರಡು ಭೂಕಂಪನಗಳು ದಾಖಲಾಗಿದೆ. ಜನರು ಆತಂಕಿತರಾಗಿದ್ದಾರೆ
ಎನ್ಸಿಎಸ್ ವರದಿ ಪ್ರಕಾರ, ರಿಕ್ಟರ್ ಮಾಪಕದಲ್ಲಿ 2.8 ತೀವ್ರತೆಯ ಭೂಕಂಪನವು ಮಣಿಪುರದ ಸೇನಾಪತಿ ಪ್ರದೇಶದಲ್ಲಿ ಸಂಭವಿಸಿದೆ. ಭೂಕಂಪನವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಎರಡನೇ ಭೂಕಂಪವು ಭೂಮಿಯ 30 ಕಿ.ಮೀ ಆಳದಲ್ಲಿ ಸಂಭವಿಸಿದೆ.
ಭೂಕಂಪಗಳಿಂದ ಗಾಯಗಳು ಅಥವಾ ಕಟ್ಟಡಗಳಿಗೆ ಹಾನಿಯಾದ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.