ಕುವೈತಿನಲ್ಲಿ 4.6 ತೀವ್ರತೆಯ ಭೂಕಂಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕುವೈತ್ ಸಿಟಿ(12-11-2020): ಕುವೈತಿನಲ್ಲಿ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯದ್ದೆಂದು ದಾಖಲಾಗಿದೆ. ಜೀವಹಾನಿಯೋ ಮತ್ತಿತರ ಯಾವುದೇ ನಾಶನಷ್ಟಗಳು ಉಂಟಾದ ಬಗೆಗೆ ವರದಿಯಾಗಿಲ್ಲ.

ಅಹ್ಮದಿ, ಜಹ್ರ, ಫಹಾಹಿಲ್, ಮಂಗಫ್, ವಹ್ರ, ರೀಖ, ಫರ್ವನಿಯ, ಸಬಾಹ್ ಅಲ್-ಸಾಲಿಮ್, ಸಾಲ್ಮಿಯ, ಹವಲ್ಲಿ ಮುಂತಾದ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

ಬುಧವಾರ ಸಂಜೆ 5.56 ರ ಹೊತ್ತಿಗೆ ನಡೆದ ಈ ಭೂಕಂಪದ ಬಗೆಗೆ ಜನರು ಆತಂಕಪಡಬೇಕಾದ ಅಗತ್ಯವಿಲ್ಲವೆಂದು ಕುವೈತ್ ಇನ್ಸ್ಟಿಟ್ಯೂಟ್ ಫಾರ್ ಸೈಂಟಿಫಿಕ್‌ ರಿಸರ್ಚ್‌ ಹೇಳಿದೆ. ಯಾವುದೇ ಅಪಾಯಗಳು ಕಂಡು ಬಂದರೆ 112 ಅಥವಸ 1804000 ಸಂಖ್ಯೆಗೆ ಮಾಹಿತಿ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿರುತ್ತಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು