ಅಸ್ಸಾಂ, ಮಣಿಪುರ & ಮೇಘಾಲಯದಲ್ಲಿ ಭೂಕಂಪನ| ಮಧ್ಯರಾತ್ರಿಯಲ್ಲಿ ಭೂಮಿ ನಡುಕಕ್ಕೆ ಬೆಚ್ಚಿಬಿದ್ದ ಜನ

earth quick
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಣಿಪುರ(03-11-2020): ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪನವು ಮಧ್ಯರಾತ್ರಿಯಲ್ಲಿ ಅಸ್ಸಾಂ, ಮಣಿಪುರ ಮತ್ತು ಮೇಘಾಲಯ ಮತ್ತು ನೆರೆಯ ಬಾಂಗ್ಲಾದೇಶವನ್ನು ನಡುಗಿಸಿದೆ. ಭೂಮಿಯ ಕಂಪನ ಸುಮಾರು 30 ಸೆಕೆಂಡುಗಳ ಕಾಲ ಉಂಟಾಗಿದೆ.

ಮಧ್ಯರಾತ್ರಿ 1.30 ಕ್ಕೆ ಅಕ್ಷಾಂಶ 26.69 ಉತ್ತರ ಮತ್ತು ರೇಖಾಂಶ 91.15 ಡಿಗ್ರಿ ಪೂರ್ವದಲ್ಲಿ 10 ಕಿ.ಮೀ ಆಳದಲ್ಲಿ ಮೇಘಾಲಯದ ನಾಂಗ್‌ಸ್ಟೊಯಿನ್‌ನಲ್ಲಿ ಭೂಕಂಪನ ದಾಖಲಾಗಿದೆ. ಅಸ್ಸಾಂನ ರಾಜಧಾನಿ ಗುವಾಹಟಿಯಿಂದ ನಾಂಗ್ಸ್ಟೈನ್ 81 ಕಿಲೋಮೀಟರ್ ದೂರದಲ್ಲಿದೆ.

ವರದಿಗಳ ಪ್ರಕಾರ, ಭೂಕಂಪನ ಶಿಲ್ಲಾಂಗ್, ಮಣಿಪುರದ ಮೈರಾಂಗ್ ಮತ್ತು ಗುವಾಹಟಿ ಮತ್ತು ಅದರ ಹೊರವಲಯದ ಪ್ರದೇಶಗಳಲ್ಲಿನ ಜನರು ಅನುಭವಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು