ನವದೆಹಲಿ(24-10-2020): ಅನ್ಯಗ್ರಹ ಜೀವಿಗಳು ಮನುಷ್ಯನ ಮೇಲೆ ಕಣ್ಣಿಟ್ಟಿದ್ದು, ಭೂಮಿಯನ್ನು ನೋಡುತ್ತದೆ ಎಂದು ಸಂಶೋಧಕರ ತಂಡವೊಂದು ಅಧ್ಯಯನ ನಡೆಸಿ ತಿಳಿಸಿದೆ.
ಕಾರ್ಲ್ ಸಗನ್ ಇನ್ಸ್ಟಿಟ್ಯೂಟ್ ಯುನಿವರ್ಸಿಟಿಗಳ ಡೈರೆಕ್ಟರ್, ಕಾರ್ನೆಲ್ನ ಪ್ರೊಫೆಸರ್ ಆಫ್ ಅಸ್ಟ್ರಾನಮಿ ಆಗಿರುವ ಲಿಸಾ ಕಾಲ್ಟೆನೆಗರ್ ನೇತೃತ್ವದ ತಂಡವು ಅಧ್ಯಯನದಲ್ಲಿ ಈ ಮಹತ್ವದ ವಿಚಾರವನ್ನು ಕಂಡುಕೊಂಡಿದ್ದಾರೆ.
ಸಂಶೋಧಕರ ತಂಡವು 1004 ನಕ್ಷತ್ರಗಳು ಇರುವಿಕೆಯನ್ನು ಗುರುತಿಸಿದ್ದು, ಅವುಗಳಲ್ಲಿ ಭೂಮಿಯಂಥ ಜೀವಿಸಲು ಯೋಗ್ಯ ಗ್ರಹಗಳಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನಕ್ಷತ್ರಗಳು ಭೂಮಿಯಿಂದ 326 ಜ್ಯೋತಿವರ್ಷಗಳ ದೂರದಲ್ಲಿವೆ. ಇನ್ನು ಆ ಪೈಕಿ ಅತ್ಯಂತ ಹತ್ತಿರದಲ್ಲಿರುವ ನಕ್ಷತ್ರವು ಸೂರ್ಯನಿಂದ 28 ಜ್ಯೋತಿವರ್ಷಗಳ ದೂರದಲ್ಲಿದೆ. ಅಲ್ಲದೆ ಅವುಗಳಲ್ಲಿ ಅತ್ಯಂತ ಪ್ರಖರವಾಗಿರುವ ನಕ್ಷತ್ರಗಳಿದ್ದು, ರಾತ್ರಿ ಹೊತ್ತಲ್ಲಿ ಅವುಗಳನ್ನ ಬರಿಗಣ್ಣಿಗೂ ಕಾಣಸಿಗಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.