ದಲಿತ ಯುವತಿಯ ಅತ್ಯಾಚಾರ ಪ್ರಕರಣ ಖಂಡಿಸಿ ಡಿವೈಎಫ್ ಐ ನಿಂದ ಪ್ರತಿಭಟನೆ         

dyfi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಂಟ್ವಾಳ(03-10-2020): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ  ದಲಿತ‌ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಾಮುಕರನ್ನು ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸರಕಾರ ರಕ್ಷಣೆ ಮಾಡುತ್ತಿದ್ದು ಮಾತ್ರವಲ್ಲ ದಲಿತ ಹೆಣ್ಣು ಮಗುವಿನ ಶವವನ್ನು ಕೂಡ ಕುಟುಂಬಸ್ಥರಿಗೆ ಬಿಟ್ಟುಕೊಡದೆ ಪೋಲೀಸರನ್ನು ಚೂ ಬಿಟ್ಟು  ಗೂಂಡಗಿರಿ ನಡೆಸುತ್ತಿರುವುದನ್ನು ಖಂಡಿಸಿ ಇಂದು ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ ಉತ್ತರ ಪ್ರದೇಶದ ದಲಿತ ಯುವತಿಯ ಅತ್ಯಾಚಾರ ಪ್ರಕರಣ ಬಗ್ಗೆ ಹಿಂದು ನಾವೆಲ್ಲ ಒಂದು ಎನ್ನುವ ಸಂಘಪರಿವಾರ ಯಾಕೆ ಮೌನವಾಗಿದೆ ಎಂದು ಪ್ರಶ್ನಿಸಿದರು, ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.ದಲಿತ ಮುಖಂಡರಾದ ಭಾನುಚಂದ್ರ ಕೃಷ್ಣಾಪುರ ‌ಮಾತನಾಡಿ  ಉತ್ತರ ಪ್ರದೇಶದಲ್ಲಿರುವುದು ರಾಮರಾಜ್ಯ ಅಲ್ಲ ಅದು ಗೂಂಡಾರಾಜ್ಯ ಸಂವಿಧಾನವನ್ನು ನಾಶ ಮಾಡಿ ಮನುವಾದಿಗಳು ಆಡಳಿತ ನಡೆಸುತ್ತಿದ್ದು ಮನುವಾದಿಗಳ ಆಡಳಿತದಲ್ಲಿ ದಲಿತರಿಗೆ ನ್ಯಾಯ ಮರೀಚಿಕೆಯಾಗಿದೆ ಎಂದು ಆರೋಪಿಸಿದರು. ಡಿವೈಎಫ್ಐ ಮುಖಂಡರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಜೆ.ಡಿ.ಎಸ್ ಮುಖಂಡರಾದ ಹಾರೂನ್ ರಶೀದ್, ದಲಿತ ಮುಖಂಡರಾದ ರಾಜಾ ಪಲ್ಲಮಜಲ್, ಪ್ರಜಾಪರಿವರ್ತನ ವೇದಿಕೆಯ ಮುಖಂಡರಾದ ಬಿ.ಟಿ.ಕುಮಾರ್, ಸತೀಶ್ ಅರಳ ಮುಂತಾದವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ ಸ್ವಾಗತಿಸಿದರು.

ಈ ಪ್ರತಿಭಟನಾ ಸಭೆಯಲ್ಲಿ ಕಲಾವಿದರಾದ ಜನಾರ್ಧನ ಕೆಸರಗದ್ದೆ, ಡಿವೈಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್,ಮುಖಂಡರಾದ ಸಯ್ಯದ್ ರಿಯಾಜ್ ಬಂಟ್ವಾಳ,ನ್ಯಾಯವಾದಿ ಮಹಮ್ಮದ್ ಗಝಾಲಿ, ರಾಜಾ ಚೆಂಡ್ತಿಮಾರ್,ಕೃಷ್ಣಪ್ಪ ಪುದ್ದೊಟ್ಟು, ಮಹಮ್ಮದಾಲಿ ಮದಕ,   ಅಲ್ತಾಪ್ ತುಂಬೆ, ಖಲೀಲ್ ಬಾಪು, ಬೂಡಾ ಮಾಜಿ ಸದಸ್ಯರಾದ ವೆಲೇರಿಯಾ, ಪುರಸಭಾ ಆಶ್ರಯ ಯೋಜನೆ ಸಮಿತಿಯ ಮಾಜಿ ಸದಸ್ಯರಾದ ತ್ರಿಶೀಲಾ , ಉಮೇಶ್ ವಾಮದಪದವು,ಪುನೀತ್ ರಾಜ್,ಪ್ರೀತಂ ಮುಂತಾದವರು ಭಾಗವಹಿಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು