ಕಾಞಂಗಾಡ್ ನಲ್ಲಿ ಮುಸ್ಲಿಂ ಯುವಕನ ಬರ್ಬರ ಕೊಲೆ: ಕೊಲೆಯಲ್ಲಿ ಮುಸ್ಲಿಂ ಲೀಗ್ ಕೈವಾಡ ಇದೆ ಎಂದ ಡಿವೈಎಫ್ ಐ

dyfi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಾಸರಗೋಡು(24-12-2020): ಡಿವೈಎಫ್ ಐ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಿನ್ನೆ ರಾತ್ರಿ ಕಾಞಂಗಾಡ್ ನಲ್ಲಿ ನಡೆದಿದೆ.

ಕಲ್ಲೂರಾವಿ ನಿವಾಸಿ ಅಬ್ದುಲ್ ರಹಮಾನ್(29) ಕೊಲೆಯಾದ ಯುವಕ. ಈತ ಬೈಕ್ ನಲ್ಲಿ ಕಾಞಂಗಾಡ್ ಗೆ ತೆರಳುತ್ತಿದ್ದಾಗ ಕಲ್ಲೂರಾವಿ-ಹಳೆ ಕಡಪ್ಪುರ ರಸ್ತೆಯಲ್ಲಿ ತಂಡವೊಂದು ಇರಿದು ಕೊಲೆ ಮಾಡಿ ಪರಾರಿಯಾಗಿದೆ.

ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಹಮಾನ್ ರನ್ನು ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆ ಅವರು ಮೃತಪಟ್ಟಿದ್ದರು

ಘಟನೆಯಲ್ಲಿ ಅಬ್ದುಲ್ ರಹಮಾನ್ ಜೊತೆಗಿದ್ದ ಶುಹೈಬ್ ಗಾಯಗೊಂಡಿದ್ದು, ಕೃತ್ಯ ನಡೆಸಿದ ತಂಡದಲ್ಲಿದ್ದ ಆರೋಪಿ ಇರ್ಷಾದ್(26) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯಲ್ಲಿ ಮುಸ್ಲಿಂ ಲೀಗ್ ಕೈವಾಡ ಇದೆ ಎಂದು ಡಿವೈಎಫ್  ಐ ಆರೋಪಿಸಿದೆ. ಗ್ರಾಮ ಪಂಚಾಯತ್ ಚುನಾವಣೆ ವೇಳೆ ನಡೆದ ಘರ್ಷಣೆಗೆ ಪ್ರತಿಕಾರವಾಗಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು