ಕಡಿದು ಬಿದ್ದ ಅಪಾಯಕಾರಿ ಹೈ ವೋಲ್ಟೇಜ್ ತಂತಿ; ಡಿ.ವೈ.ಎಫ್.ಐಯಿಂದ ಮೆಸ್ಕಾಂ ಶಾಖಾಧಿಕಾರಿಗೆ ಮನವಿ

Share on facebook
Share on twitter
Share on linkedin
Share on whatsapp
Share on telegram
Share on email
Share on print
ವಿಟ್ಲ ( 12/10/2020): ವಿಟ್ಲದ ಮೇಗಿನಪೇಟೆ ಪೊನ್ನೊಟ್ಟು ಪ್ರದೇಶದಲ್ಲಿ ಖಾಸಗಿ ಜಾಗದಲ್ಲಿ ಹಾದುಹೋಗುತ್ತಿರುವ ಅಪಾಯಕಾರಿ ವಿದ್ಯುತ್ ತಂತಿಯು ಕಳೆದ ಆರು ತಿಂಗಳಿನಲ್ಲಿ ಹಲವು ಬಾರಿ ಕಡಿದು ಬಿದ್ದು ಪ್ರದೇಶದ ಜನರಿಗೆ ಅಪಾಯದ ಸನ್ನಿವೇಶ  ಸೃಷ್ಟಿಯಾಗುತ್ತಿದೆ.  ಹಳೆಯ ತಂತಿಯನ್ನು ತೆಗೆದು ಹೊಸ ತಂತಿ ಜೋಡಿಸಲು  ವಿಟ್ಲ ಮೆಸ್ಕಾಂ ಶಾಖಾಧಿಕಾರಿಗೆ ಡಿ.ವೈ.ಎಫ್.ಐ ವತಿಯಿಂದ  ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ರಾಮಣ್ಣವಿಟ್ಲ, ಉದ್ಯಮಿ ಜಿ ಎಸ್ ಹಮೀದ್, ಡಿ ವೈ ಎಫ್ ಐ ಮುಖಂಡರಾದ ಇಕ್ಬಾಲ್ ಹಳೆಮನೆ, ವಿಟ್ಲ ವಲಯ ಅಧ್ಯಕ್ಷ ನುಜುಮ್ ಅಳಿಕೆ ಉಪಸ್ಥಿತರಿದ್ದರು. ಶಾಖಾಧಿಕಾರಿಯು ಒಂದು ತಿಂಗಳ ಸಮಯದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು