ದುಬೈ: ಆರು ವಿಧದ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದವರಿಗೆ ಮಾಸ್ಕ್ ಧರಿಸಬೇಕಿಲ್ಲ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದುಬೈ(9-11-2020): ಆರು ವಿಧದ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದವರಿಗೆ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಅಂಥವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅನುಮತಿ ಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ.

ದುಬೈ ಹೆಲ್ತ್ ಅಥಾರಿಟಿಯ ಜನರಲ್ ಮೆಡಿಕಲ್ ಕಮಿಟಿಯ http://dxbpermit.gov.ae ಲಿಂಕಿಗೆ ಹೋಗಿ ಅರ್ಜಿ ಸಲ್ಲಿಸಿದರೆ, ಐದು ದಿನಗಳೊಳಗೆ ಅನುಮತಿ ಪತ್ರವನ್ನು ಪಡೆದುಕೊಳ್ಳಬಹುದು.

ಮುಖದ ಚರ್ಮದ ಮೇಲಿನ ಫಂಗಸ್ ಸಮಸ್ಯೆಯಿಂದಾಗಿ ತುರಿಕೆ, ರಕ್ತಸ್ರಾವ ಸಮಸ್ಯೆಗಳಿಂದ ಬಳಲುತ್ತಿರುವವರು, ಮಾಸ್ಕ್ ಸ್ಪರ್ಶದಿಂದ ಚರ್ಮದಲ್ಲಿ ಅಲರ್ಜಿಯ ಸಮಸ್ಯೆಯಿರುವವರು, ಮುಖದಲ್ಲಿ ಹೆರ್ಪೆಸ್ ಸಿಂಪ್ಲೆಕ್ಸ್ ಸೋಂಕು ಇರುವವರು, ತೀವ್ರವಾದ ಕ್ರೋನಿಕ್ ಸಿನುಸ್ಟಿಕ್ಸ್ ನಿಂದ ಬಳಲುತ್ತಿರುವವರು, ತೀವ್ರವಾದ ಅಸ್ತಮಾ ರೋಗಿಗಳು, ವಿಶೇಷ ಚೇತನ ವ್ಯಕ್ತಿಗಳು ಮತ್ತು ಮಾನಸಿಕ ರೋಗಿಗಳು ಇತ್ಯಾದಿ ಜನರು ಈ ಅನುಮತಿ ಸಿಗುವ ವ್ಯಾಪ್ತಿಯಲ್ಲಿ ಬರುತ್ತಾರೆ.

ವೈದ್ಯಕೀಯ ದಾಖಲೆಗಳ ಜೊತೆಗೆ ಯುಎಇ ಐಡಿ ಕಾರ್ಡನ್ನೂ ಅರ್ಜಿಯ ಜೊತೆಗೆ ಸಲ್ಲಿಸಬೇಕಾಗುತ್ತದೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು