ದುಬೈಗೆ ಹೊರಡುವ ಭಾರತೀಯ ಪ್ರಯಾಣಿಕರಿಗೆ ಹೊಸ ಶರತ್ತು ಅನ್ವಯ | ಇನ್ನು ಮುಂದೆ ಪ್ರಯಾಣಕ್ಕೆ 48 ಗಂಟೆ ಮೊದಲು ಪಿಸಿಆರ್ ಪರೀಕ್ಷೆ ನಡೆಸಿರಬೇಕು

Share on facebook
Share on twitter
Share on linkedin
Share on whatsapp
Share on telegram
Share on email
Share on print

ದುಬೈ: ಭಾರತದಿಂದ ದುಬೈಗೆ ಹೊರಡುವ ಪ್ರಯಾಣಿಕರಿಗೆ ಹೊಸ ಶರತ್ತು ಅನ್ವಯವಾಗಲಿದೆ. ಅದರಂತೆ ದುಬೈಗೆ ಹೊರಡುವ ಪ್ರಯಾಣಿಕರು ನಲ್ವತ್ತೆಂಟು ಗಂಟೆಗಳೊಳಗೆ ಪಡೆದ ಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.

ಮೊದಲು ಎಪ್ಪತ್ತೆರಡು ಗಂಟೆಗಳ ಮೊದಲು ನಡೆಸಲಾದ ಪಿಸಿಆರ್ ಪ್ರಮಾಣ ಪತ್ರ ಸಾಕಾಗುತ್ತಿತ್ತು. ಇನ್ನು ಮುಂದೆ ಇದನ್ನು 48 ಗಂಟೆಗೆ ಇಳಿಸಿಲಾಗುವುದು. ಹೊಸ ನಿಯಮಾವಳಿಯು ಎಪ್ರಿಲ್ 22 ರಿಂದ ಜಾರಿಗೆ ಬರಲಿದೆ.

ಸೂಚಿಸಲಾದ 48 ಗಂಟೆ ಸಮಯ ಮಿತಿಯು ಗಣನೆಗೆ ಬರುವುದು ಮೂಗಿನ/ಗಂಟಲ ದ್ರವವನ್ನು ಶೇಖರಿಸಿದ ಸಮಯದಿಂದ ಆರಂಭಿಸಿ ಎಂದೂ, ಫಲಿತಾಂಶ ಬಂದ ನಂತರದ ಸಮಯ ಅಲ್ಲವೆಂದೂ ವಿಮಾನ ಸಂಸ್ಥೆಗಳು ಸ್ಪಷ್ಠಪಡಿಸಿವೆ.

ಪಿಸಿಆರ್ ಪ್ರಮಾಣ ಪತ್ರವು ಕ್ಯೂಆರ್ ಕೋಡ್ ಹೊಂದಿರುವುದು ಕಡ್ಡಾಯವಾಗಿದೆ. ಮತ್ತು ದುಬೈ ವಿಮಾನ ನಿಲ್ದಾಣದಲ್ಲಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿದಾಗ ಅವರಿಗೆ ಒರಿಜಿನಲ್ ಪ್ರಮಾಣ ಪತ್ರವು ಲಭಿಸುವಂತಿರಬೇಕು.

ಪ್ರಮಾಣ ಪತ್ರದಲ್ಲಿ ಪಿಸಿಆರ್ ಪರೀಕ್ಷಾ ಫಲಿತಾಂಶವು ನೆಗೆಟಿವ್ ಎಂದು ಇಂಗ್ಲೀಷ್ ಅಥವಾ ಅರಬಿ ಭಾಷೆಯಲ್ಲಿ ಸ್ಪಷ್ಠವಾಗಿ ಬರೆದಿರಬೇಕು. ಇದಲ್ಲದೇ ಪರೀಕ್ಷೆ ನಡೆಸಿದ ಸಮಯ ಮತ್ತು ದಿನಾಂಕವನ್ನೂ ನಮೂದಿಸಿರಬೇಕು. ಅಂಗೀಕೃತ ಪ್ರಯೋಗಾಲಯಗಳಲ್ಲಿಯೇ ಪಿಸಿಆರ್ ಪರೀಕ್ಷೆಯನ್ನು ನಡೆಸಿರಬೇಕಾಗುತ್ತದೆ.

ಏರ್ ಇಂಡಿಯಾ ಎಕ್ಸ್ ಪ್ರೆಸ್, ಫ್ಲೈ ದುಬೈ ಮೊದಲಾದ ವಿಮಾನಯಾನ ಸಂಸ್ಥೆಗಳು ಎಪ್ರಿಲ್ 22 ರಿಂದಲೇ ಹೊಸ ನಿಯಮಾವಳಿಯನ್ನು ಜಾರಿಗೆ ತರಲಿದೆಯೆಂದು ಈಗಾಗಲೇ ಪ್ರಕಟಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು