ಗುವಾಹಟಿ(27-02-2021): ಅಂತರಾಷ್ಟ್ರೀಯ ಓಟಗಾರ್ತಿ ಚಿನ್ನದ ಹುಡುಗಿ ಹಿಮಾದಾಸ್ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಹಿಮಾ ದಾಸ್ ಅವರಿಗೆ ನೇಮಕಾತಿ ಪತ್ರವನ್ನು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಅವರು ನೀಡಿದ್ದಾರೆ.
ಹಿಮಾದಾಸ್ ಅಧಿಕಾರ ಸ್ವೀಕಾರದ ವೇಳೆ ಅಸ್ಸಾಂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಜೊತೆಗಿದ್ದರು.
ಅಧಿಕಾರ ಸ್ವೀಕರಿಸಿದ ಹಿಮಾದಾಸ್ ಅಸ್ಸಾಂ ಪೊಲೀಸ್ ಇಲಾಖೆಗೆ ಸೇರ್ಪಡೆ ನನ್ನ ಬಾಲ್ಯದ ಬಹುದೊಡ್ಡ ಕನಸು. ಅದು ಈಗ ಈಡೇರಿದೆ ಎಂದು ಹೇಳಿದ್ದಾರೆ. ಹಿಮದಾಸ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.