ಡ್ರಗ್ಸ್ ಪ್ರಕರಣ: ಅ.30 ರವರೆಗೆ ಶಾರುಖ್ ಪುತ್ರ ಆರ್ಯನ್ ಗೆ ನ್ಯಾಯಾಂಗ ಬಂಧನ ವಿಸ್ತರಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಏಳು ಆರೋಪಿಗಳ ನ್ಯಾಯಾಂಗ ಬಂಧನವನ್ನು ಮುಂಬೈ ಕೋರ್ಟ್ ಅಕ್ಟೋಬರ್ 30 ರವರೆಗೆ ವಿಸ್ತರಿಸಿದೆ.

ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ಕ್ರೂಸ್ ಪಾರ್ಟಿಯ ಮೇಲೆ ದಾಳಿ ನಡೆಸಿದ ನಂತರ ಆರೋಪಿಗಳನ್ನು ಎನ್ ಸಿಬಿ ಬಂಧಿಸಿತ್ತು.

ಗುರುವಾರ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೊಪಿಕ್ ಸಬ್‌ಸ್ಟಾನ್ಸ್ ನ್ಯಾಯಾಲಯವು ಖಾನ್ ಗೆ ಮಾದಕವಸ್ತು ಪೂರೈಕೆದಾರ ಆರೋಪಿತ ಅಚಿತ್ ಕುಮಾರ್ ಸೇರಿದಂತೆ ಮೂವರು ಆರೋಪಿಗಳ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಿತ್ತು.ಆದರೆ ವಿಚಾರಣೆಯ ಸಮಯದಲ್ಲಿ, ಎನ್ ಸಿಬಿ ಖಾನ್ ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 30 ರವರೆಗೆ ವಿಸ್ತರಿಸಲು ಕೋರಿದೆ.

ಅರ್ಯಾನ್ ಖಾನ್ ಅವರನ್ನು ಮೊದಲಿಗೆ ಮಾದಕದ್ರವ್ಯ ವಿರೋಧಿ ಏಜೆನ್ಸಿಯ ವಶಕ್ಕೆ ನೀಡಲಾಗಿತ್ತು, ಆದರೆ ಅಕ್ಟೋಬರ್ 7 ರಂದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು