ದುಬೈ(15/11/2020): ಕೋವಿಡ್ 19 ಬಳಿಕ ಅದ್ಧೂರಿ ವಿವಾಹಗಳು ಕಡಿಮೆಯಾಗಿದೆ. ಅನೇಕರು ಎಷ್ಟು ಸರಳವಾಗಿ ಹಾಗೂ ಎಷ್ಟು ವಿಭಿನ್ನವಾಗಿ ವಿವಾಹವಾಗಬಹುದು ಎಂದು ಯೋಚಿಸಿಕೊಂಡು ವಿವಾಹವಾಗುತ್ತಿದ್ದಾರೆ.
ಕೇರಳ ಮೂಲದ ಮುಹಮ್ಮದ್ ಜಝೇಮ್ ಎನ್ನುವವರ ವಿವಾಹ ಈಗ ವೈರಲ್ ಆಗಿದೆ. ಹೌದು. ಅವರು ಡ್ರೈವ್ ಬೈ ವಿವಾಹವಾಗಿ, ಅಚ್ಚರಿಗೆ ಕಾರಣವಾಗಿದ್ದಾರೆ.
ಈ ವಿವಾಹ ಹೇಗೆಂದರೆ, ಮದುವೆಗೆ ಆಗಮಿಸುವ ಸಂಬಂಧಿಕರು ಹಾಗೂ ಸ್ನೇಹಿತರು ಕಾರಿನಿಂದ ಕೆಳಗಿಳಿಯುವಂತಿಲ್ಲ. ಕಾರಿನಲ್ಲೇ ಕುಳಿತು ನವದಂಪತಿಗೆ ಶುಭ ಹಾರೈಸಬೇಕಿತ್ತು.
ಈ ಬಗ್ಗೆ ವರ ಜಝೀಮ್ ಹೇಳುವುದು ಹೀಗೆ; ”ನಮ್ಮ ತಂದೆತಾಯಿ ವಯಸ್ಕರು. ಆದ್ದರಿಂದ ಅವರ ಆರೋಗ್ಯದ ಕಾಳಜಿ ನಮಗಿತ್ತು. ಜೊತೆಗೆ ಕೋವಿಡ್ ನಿಯಮವನ್ನೂ ಪಾಲಿಸಬೇಕಿತ್ತು. ಆದ್ದರಿಂದ ಮನೆಯ ಮುಂದೆ ಹೂವಿನಿಂದ ಅಲಂಕೃತಕರಿಸಿ ವೇದಿಕೆ ನಿರ್ಮಿಸಿ, ಅಲ್ಲಿ ನಾವಿಬ್ಬರು ನಿಂತಿದ್ದೆವು. ಮದುವೆಗೆ ಆಗಮಿಸಿದ್ದ ಅತಿಥಿಗಳು ತಮ್ಮ ಕಾರಿನಲ್ಲಿ ಕುಳಿತು ಶುಭ ಹಾರೈಸುವ ಬಗ್ಗೆ ಮೊದಲೇ ಸೂಚಿಸಿದ್ದೆವು. ಅತಿಥಿಗಳು ಮಂಟಪದ ಮುಂದೆ ಕಾರು ನಿಲ್ಲಿಸಿ, ನವ ದಂಪತಿಗಳಾದ ನಮ್ಮ ಫೋಟೊ ಕ್ಲಿಕ್ಕಿಸಿಕೊಂಡು, ಹಿಂದಿರುಗಿದರು”