ಡ್ರಿಂಕ್ ಆಂಡ್ ಡ್ರೈವ್; ಇಬ್ಬರು ಬಲಿ, ಕುಡುಕನ ಹುಚ್ಚಾಟಕ್ಕೆ ಭೀತಿಗೊಂಡ ಸಾರ್ವಜನಿಕರು!

accident
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೆ.ಆರ್.ಪೇಟೆ(05-10-2020): ಡ್ರಿಂಕ್ ಆಂಡ್ ಡ್ರೈವ್ ಮಾಡಿ ಕಾರು ಚಾಲಕನೋರ್ವ ಇಬ್ಬರನ್ನು ಬಲಿಪಡೆದುಕೊಂಡಿರುವ ಘಟನೆ ಕೆ. ಆರ್ ಪೇಟೆಯಲ್ಲಿ ನಡೆದಿದೆ.

 ಜಯನಗರ ಬಡಾವಣೆಯ ಸತೀಶ್(40), ಅನುವಿನಕಟ್ಟೆ-ಕೆರೆಕೋಡಿ ನಿವಾಸಿ ಪ್ರಭಾಕರ್(42) ಮೃತ ದುರ್ದೈವಿಗಳು. ಮಂಡ್ಯದ ತಾವರೆಕೆರೆ ನಿವಾಸಿ ಕಿರಣ್‌ಕುಮಾರ್ ಎಂಬಾತ ಮದ್ಯ ಸೇವನೆ ಮಾಡಿ ಮಂಡ್ಯ ಕಡೆಯಿಂದ ತನ್ನ ಹೊಸ ಕಾರು ಓಡಿಸಿಕೊಂಡು ಕೆ.ಆರ್‌.ಪೇಟೆ ಕಡೆಗೆ ಬರುವಾಗ ಘಟನೆ ನಡೆದಿದೆ.

ಹೊನ್ನೇನಹಳ್ಳಿ ಗೇಟ್‌ ಬಳಿ ಬೈಕ್‌ನಲ್ಲಿ ಬರುತ್ತಿದ್ದ ಸತೀಶ್ ಹಾಗೂ ಪ್ರಭಾಕರ್ ಅವರಿಗೆ ಕಿರಣ್‌ಕುಮಾರ್‌ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ನಂತರ ಎಲ್.ಐ.ಸಿ. ಕಚೇರಿ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಶಿವು ಎಂಬುವವರಿಗೆ ಮತ್ತೆ ಡಿಕ್ಕಿ ಹೊಡೆಡಿದ್ದಾನೆ. ಅಲ್ಲಿಂದಲೂ ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಆತನನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು