‘ಡಿಆರ್ ಡಿಒ’ ತಯಾರಿಸಿದ ಕೋವಿಡ್ ಮದ್ದು ತುರ್ತು ಬಳಕೆಗೆ ಅನುಮತಿ | ಹುಡಿ ರೂಪದಲ್ಲಿರುವ ಈ ಮದ್ದು ನೀರಿನಲ್ಲಿ ಕಲಸಿ ಕುಡಿಯುವಂಥದ್ದು

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೋವಿಡ್ ಎರಡನೇ ಅಲೆಗೆ ದೇಶವು ತತ್ತರಿಸಿರುವಂತೆಯೇ ಶುಭ ಸುದ್ದಿಯೊಂದು ಬಂದಿದೆ. ‘ಡಿಆರ್ ಡಿಒ’ ತಯಾರಿಸಿದ ಕೋವಿಡ್ ಮದ್ದುಗಳು ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.

ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಝೇಶನ್ (ಡಿಆರ್ ಡಿಒ) ತಯಾರಿಸಿದ ಹೊಸ ಮದ್ದು, ಕೋವಿಡ್ ರೋಗವನ್ನು ಗುಣಪಡಿಸುವಲ್ಲಿ ಸಫಲವಾಗಿದೆಯೆಂದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಸಂಸ್ಥೆಯು ಇದರ ತುರ್ತು ಬಳಕೆಗೆ ಅನುಮತಿ ನೀಡಿದೆ.

‘2-ಡಿಓಕ್ಸ್ಡಿಗ್ಲುಕೋಸ್ಎಂದು ಕರೆಯಲಾಗುವ ಮದ್ದಿಗೆ ಕೋವಿಡ್ ರೋಗವನ್ನು ಗುಣಪಡಿಸುವ ಸಾಮರ್ಥ್ಯವಿದೆಯೆಂದು ಅಧ್ಯಯನಗಳು ತೋರಿಸಿ ಕೊಟ್ಟಿವೆ. ಒಳರೋಗಿಗಳಿಗೆ ಮದ್ದನ್ನು ನೀಡಿದಾಗ ಮೂರೇ ದಿನಗಳಲ್ಲಿ ಕೋವಿಡಿನಿಂದ ಮುಕ್ತರಾಗಿ, ಆರ್ ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿರುವುದು ವರದಿಯಾಗಿದೆ.

ನೀರಿನಲ್ಲಿ ಕಲಸಿ, ಬಾಯಿ ಮೂಲಕ ಸೇವಿಸುವಂತಹಾ ಮದ್ದು, ಸಣ್ಣ ಚೀಲದೊಳಗೆ ಹುಡಿ ರೂಪದಲ್ಲಿ ವೈದ್ಯಕೀಯ ಸಂಸ್ಥೆಗಳಿಗೆ ಬರಲಿದೆ. ಮದ್ದಿನಿಂದ ಹೇಳಿಕೊಳ್ಳುವಂತಹಾ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲವೆಂದು ವಿವಿಧ ಹಂತದ ಪರೀಕ್ಷೆಗಳಿಂದ ತಿಳಿದುಬಂದಿದೆ.

‘ಡಿಆರ್‍ ಡಿಒ’ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆ್ಯಂಡ್ ಅಲ್ಲೈಡ್ ಸೈನ್ಸ್(INMAS-DRDO) ಎಂಬ ಸಂಸ್ಥೆಯು ಹೈದರಾಬಾದಿನ ಡಾ. ರೆಡ್ಡೀಸ್ ಲೆಬೋರೇಟರಿಯ ಸಹಯೋಗದೊಂದಿಗೆ ಮದ್ದನ್ನು ತಯಾರಿಸಿದೆ.

ಕೋವಿಡ್ ರೋಗವು ತೀವ್ರವಾಗಿ ಉಲ್ಬಣಿಸುತ್ತಿರುವ ಸನ್ನಿವೇಶದಲ್ಲಿ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಸಮಯವನ್ನು ಮೀಸಲಿರಿಸದೇ ತುರ್ತು ಬಳಕೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ದುಗಳನ್ನು ತಯಾರಿಸಲು ಸಂಸ್ಥೆಯು ಯೋಜನೆ ರೂಪಿಸುತ್ತಿದೆಯೆಂದು ಹೇಳಲಾಗುತ್ತಿದೆ. ದೇಶಾದ್ಯಂತ ಲಸಿಕೆ ಕೊರತೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮಾತ್ರೆಗಳು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಸಮಾಧಾನ ತರುವ ವಿಚಾರವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು