ಕರ್ನಾಟಕ- ಕೇರಳ ಪ್ರಯಾಣ ನಿಷೇಧವಿಲ್ಲ, ಆದರೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

dr. sudhakar
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(24-02-2021): ಕರ್ನಾಟಕ ಮತ್ತು ಕೇರಳ ಅಂತರಾಜ್ಯ ಪ್ರಯಾಣವನ್ನು ನಿಷೇಧಿಸಿಲ್ಲ. ಆದರೆ ಪ್ರಯಾಣಕ್ಕೆ 72 ಗಂಟೆಗೆ ಹಳೆಯದಲ್ಲದ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ವಯನಾಡ್ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಗಡಿಯಲ್ಲಿ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದರು. ಸರಕಾರದ ಆದೇಶದಿಂದಾಗಿ ಸರಕು ಸಾಗಾಟ ಸೇರಿದಂತೆ ಅಗತ್ಯ ಸಂಚಾರಕ್ಕೆ ಕೂಡ ಅಡ್ಡಿಯಾಗಿದೆ. ದಕ್ಷಿಣ ಕನ್ನಡದ ತಲಪಾಡಿ ಮಾರ್ಗವಾಗಿ ಸಂಚಾರ ಬಂದ್ ಹಿನ್ನೆಲೆಯಲ್ಲಿ ಗಡಿನಾಡಿನಿಂದ ಮಂಗಳೂರಿಗೆ ವಿದ್ಯಾಬ್ಯಾಸಕ್ಕೆ, ಕರ್ತವ್ಯಕ್ಕೆ ಮತ್ತು ಆಸ್ಪತ್ರೆಗಳಿಗೆ ಬರುವವರಿಗೆ ಸಮಸ್ಯೆ ಉಂಟಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಡಾ.ಸುಧಾಕರ್, ಹೋಟೆಲ್‌, ರೆಸಾರ್ಟ್‌, ಹಾಸ್ಟೆಲ್‌, ಹೋಂ ಸ್ಟೇಗಳು ಸೇರಿದಂತೆ ಕೇರಳದಿಂದ ಹಿಂದಿರುಗುವವರಿಗೆ ಪ್ರವೇಶ ನೀಡುವ ಮುನ್ನ ಕೋವಿಡ್‌ ನೆಗೆಟಿವ್ ವರದಿ ಹೊಂದಿರಬೇಕೆಂದು ಹೇಳಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು