ಡಾ. ರಾಮರಾವ್ ಮಹಾರಾಜರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ

yadgiri
Share on facebook
Share on twitter
Share on linkedin
Share on whatsapp
Share on telegram
Share on email
Share on print

ಯಾದಗಿರಿ(31-10-2020): ಪರಮಪೂಜ್ಯ ಡಾ. ರಾಮರಾವ್ ಮಹಾರಾಜರು ಅಖಿಲ ಭಾರತ ಬಂಜಾರಾ ಗುರುಪೀಠ ಪೋಹರಾದೇವಿ  ಮಹಾರಾಷ್ಟ್ರ  ಇವರ ನಿಧನಕ್ಕೆ ಬಂಜಾರಾ ವಿಕಾಸ ಮೀಸನ ಭಾರತ್ ಯಾದಗಿರಿ ಸಂತಾಪವನ್ನು ವ್ಯಕ್ತಪಡಿಸಿದೆ.

ಮಹಾರಾಜರು ಕಳೆದ 30 ವರ್ಷಗಳಿಂದ ನಿಕಟ ಸಂಬಂಧ ಹೊಂದಿದ್ದರು. ಅಲ್ಲದೆ 2012 ರಲ್ಲಿ ನೆಹರು ಮೈದಾನ ಹುಬ್ಬಳ್ಳಿಯಲ್ಲಿ ಮತ್ತು ಲಿಂಗಸುರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮ್ಮೇಳನದಲ್ಲಿ ಆಗಮಿಸಿ ಆಶೀರ್ವಾದ ನೀಡಿದ್ದರು.ಈತ್ತೀಚಿಗೆ ನವದೆಹಲಿಯಲ್ಲಿ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ದೇಶದ ಬಂಜಾರಾ ಭಾಷೆಗೆ ಮಾನ್ಯತೆ,ರಾಷ್ಟ್ರೀಯ ಬಂಜಾರಾ ಅಭಿವೃದ್ಧಿ ಮಂಡಳಿ ಸ್ಥಾಪನೆ ಮತ್ತು ಇಡೀ ದೇಶದ ಬಂಜಾರರಿಗೆ sc ಪಟ್ಟಿಯಲ್ಲಿ ಸೇರಿಸಲು ಮನವಿ ಮಾಡಿದ್ದರು.ಇಂತಹ ಮಹಾನ್ ಪೂಜ್ಯರ ನಿಧನದಿಂದ ಭಾರತ ದೇಶದ ಬಂಜಾರರಿಗೆ ತುಂಬಲಾರದ ಹಾನಿಯಾಗಿದೆ. ಅವರ ಚಿರ ಆತ್ಮಕ್ಕೆ ಕುಲಗುರು ಸೇವಾಲಲರು ಮತ್ತು ಜಗನ್ಮಾತೆ ಚಿರ ಶಾಂತಿ ನೀಡಲೆಂದು ಬಂಜಾರಾ ವಿಕಾಸ ಮೀಸನ ಭಾರತ್ ಯಾದಗಿರಿ ಜಿಲ್ಲಾಧ್ಯಕ್ಷ  ಹಣಮಂತ ಆರ್ ಚವ್ಹಾಣ ಹೇಳಿದ್ದಾರೆ.

ವಿಡಿಯೋ ವೀಕ್ಷಿಸಿ..ಯೂಟ್ಯೂಬ್ ಗೆ ಸಬ್ ಸ್ಕ್ರೈಬ್ ಆಗಿ…

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು