ಡಬಲ್ ಮಾಸ್ಕ್ ಹಾಕುವಂತೆ ಪ್ರೇರೇಪಿಸಲು ‘ಶೋಲೆ’ ಚಿತ್ರದ ದೃಶ್ಯವನ್ನು ಹಂಚಿದ ಮುಂಬೈ ಪೋಲೀಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬಯಿ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ರಾಜ್ಯ ಸರಕಾರಗಳು ಮತ್ತು ಪೋಲೀಸ್ ಇಲಾಖೆಗಳು ಜನರನ್ನು ಜಾಗೃತಿ ಮೂಡಿಸಲು ಪಾಡು ಪಡುತ್ತಿದೆ.

ಇತ್ತೀಚೆಗೆಷ್ಟೇ ಕೇರಳ ಪೋಲೀಸರು ಜನರನ್ನು ಎಚ್ಚರಿಸಲು ಹಿಟ್ ಹಾಡೊಂದರ ಧಾಟಿಯಲ್ಲಿರುವ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಇದೀಗ ಮುಂಬೈ ಪೋಲೀಸರು ಕೂಡಾ ತಮ್ಮ ಟ್ವಿಟರ್ ಅಕೌಂಟಿನಲ್ಲಿ ಹಳೆಯ ಸಿನಿಮಾವೊಂದರ ದೃಶ್ಯವಿರುವ ಮೀಮ್‍ನ್ನು ಬಳಸಿಕೊಂಡಿದ್ದಾರೆ.

ಜನರು ಕೋವಿಡಿನಿಂದ ರಕ್ಷಣೆ ಪಡೆಯಲು ಎರಡೆರಡು ಮಾಸ್ಕುಗಳನ್ನು ಬಳಸಬೇಕೆಂದು ಹಲವು ತಜ್ಞರು ಸಲಹೆ ನೀಡಿದ್ದರು. ಅದರಲ್ಲೂ ಜನ ಜಂಗುಳಿಯಿರುವ ಕಡೆಗಳಲ್ಲಿ ಡಬಲ್ ಮಾಸ್ಕ್ ಮತ್ತು ಸುತ್ತಲೂ ಸೀಲುಗಳು ಕೂಡಾ ಇರಬೇಕು ಎಂದಿದ್ದರು. ಹಿನ್ನೆಲೆಯಲ್ಲಿ ಮುಂಬೈ ಪೋಲೀಸರು 1975 ಹಿಟ್ ಸಿನಿಮಾಶೋಲೆ ಡೈಲಾಗ್ ಮತ್ತು ದೃಶ್ಯವನ್ನು ಬಳಸಿಕೊಂಡಿದ್ದಾರೆ.

1975 ಟ್ರೆಂಡ್ಡೆನಿಮ್ ಆನ್ ಡೆನಿಮ್‘, 2021 ಟ್ರೆಂಡ್ಮಾಸ್ಕ್ ಆನ್ ಮಾಸ್ಕ್ಎಂಬ ಶೀರ್ಷಿಕೆ ಕೊಟ್ಟು ಅಮಿತಾಬ್ ಮತ್ತು ಧರ್ಮೇಂದ್ರ ನಟಿಸಿರುವ ಪಾತ್ರಗಳನ್ನು ತೋರಿಸಲಾಗಿದೆ.

ಕೋವಿಡ್ ಎರಡನೇ ಅಲೆಯು ದೇಶಾದ್ಯಂತ ಸುನಾಮಿಯಂತೆ ಅಪ್ಪಳಿಸಿದ್ದು, ಅತಿ ಹೆಚ್ಚು ಸಂಕಷ್ಟಕ್ಕೊಳಗಾದ ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡಾ ಒಂದು. ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನದಲ್ಲಿ 57,640 ಸೋಂಕು ಪ್ರಕರಣಗಳು ದಾಖಲಾಗಿದ್ದು, 920 ಮಂದಿ ಸಾವಿಗೀಡಾಗಿದ್ದಾರೆ. ದೇಶಾದ್ಯಂತ ನಿನ್ನೆ 4,12,262 ಪ್ರಕರಣಗಳು ಪತ್ತೆಯಾಗಿದ್ದು, 3980 ಮಂದಿ ಕೋವಿಡ್ ತಗುಲಿ ಮೃತಪಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು