ಮಿಡಿದ ವಿದ್ಯಾರ್ಥಿಗಳ ಹೃದಯ: ಬಡ ಮಗುವಿನ ಚಿಕಿತ್ಸೆಗೆ ಸಹಾಯ ಮಾಡಲು ಬೀದಿಗಿಳಿದ ತುಳುವ ಜೋಕುಲು..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಳ್ತಂಗಡಿ(28-10-2020): ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗೆ ಸಹಾಯ ಮಾಡಲು ವಿದ್ಯಾರ್ಥಿಗಳ ತುಳುವ ಜೋಕುಲು ತಂಡ ಬೀದಿಗಿಳಿದು ಕಲೆಕ್ಸನ್ ಮಾಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ರವಿ ಪೂಜಾರಿ–ಪೂರ್ಣಿಮಾ ದಂಪತಿಯ 3 ವರ್ಷ ವಯಸ್ಸಿನ ಆರಾಧ್ಯಳಿಗೆ ಶ್ರವಣ ದೋಷದೊಂದಿಗೆ ಮಾತನಾಡಲು ಆಗುವುದಿಲ್ಲ, ಬೆಂಗಳೂರಿನ ಮಾನಸ E N T ಕೇಂದ್ರದ ತಜ್ಞ ವೈದ್ಯರ ಪ್ರಕಾರ ಸೂಕ್ತ ಚಿಕಿತ್ಸೆ ನೀಡಿದರೆ ಮಗು ಇತರರಂತೆ ಮಾತನಾಡಬಹುದು ಹಾಗೂ ಕಿವಿಯೂ ಕೇಳಿಸುವಂತಾಗುತ್ತದೆ.

ಆದರೆ ಇದಕ್ಕಾಗಿ ಸುಮಾರು 14 ಲಕ್ಷ ರೂ, ವೆಚ್ಚವಾಗಲಿದೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ.
ತೀರಾ ಬಡತನದಲ್ಲಿರುವ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚ ಭರಿಸಲು ಕಷ್ಟವಾಗಿದೆ. ಈ ವಿಚಾರ ತುಳುವ ಜೋಕುಲು ತಂಡಕ್ಕೆ ತಿಳಿದು ಬಂದ ಕೂಡಲೇ ತಂಡದ ಸದಸ್ಯರಾದ ಸಂತೋಷ್ ಪಡುಬೆಟ್ಟು ಮೋಹಿತ್ ಆಚಾರ್ಯ, ವಿನ್ಸೆಂಟ್ ದೆಸೋಜ, ಮಂಥನ್ ಜಿ ಸಿ, ಅನಂತ್ ಕುಮಾರ್ ನಾಯ್ಕ್, ಸಂದೀಪ್ ಸೇರಿ ಉಪ್ಪಿನಂಗಡಿ, ನೆಲ್ಯಾಡಿ ಪರಿಸರದಲ್ಲಿ ಹಣವನ್ನು ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಗುವಿನ ಕುಟುಂಬಕ್ಕೆ ನೀಡಿದ್ದಾರೆ. ಮಗುವಿಗೆ ಸಹಾಯವನ್ನು ಮಾಡಿದ ಉಪ್ಪಿನಂಗಡಿಯ ನಾಗರಿಕರಿಗೆ ಅವರು ಧನ್ಯವಾದವನ್ನು ಸಲ್ಲಿಕೆ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು