ದೋಹಾ-ಕತರ್: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅನಿವಾಸಿಗಳಿಗೆ, ವಿದೇಶೀ ಕಂಪೆನಿಗಳಿಗೆ ಹೆಚ್ಚಿನ ಅವಕಾಶ

doha
Share on facebook
Share on twitter
Share on linkedin
Share on whatsapp
Share on telegram
Share on email
Share on print

ದೋಹಾ (08-10-2020):  ಅನಿವಾಸಿಗಳಿಗೆ ಮತ್ತು ವಿದೇಶೀ ಕಂಪೆನಿಗಳಿಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಾಲೀಕತ್ವ ಹೊಂದಲು ಹೆಚ್ಚು ಸ್ಥಳಗಳಲ್ಲಿ ಅನುಮತಿ ನೀಡಲಾಯಿತು. ಇದರಿಂದಾಗಿ ಮಾಲುಗಳು, ಅಂಗಡಿಗಳ ಮಾಲೀಕತ್ವ ಹೊಂದಲು, ರೆಸಿಡೆನ್ಸ್ ಏರಿಯಾಗಳಲ್ಲಿ ಮನೆ ಖರೀದಿಸಲು ಅನಿವಾಸಿಗಳಿಗೂ ಅವಕಾಶ ಸಿಕ್ಕಂತಾಗಿದೆ. ಬಾಡಿಗೆಯ ಅವಧಿ ಮುಗಿಯುವವರೆಗೆ ಇಂಥವರ ಕುಟುಂಬಿಕರಿಗೂ ಕತರಿನಲ್ಲಿ ರೆಸಿಡೆನ್ಸ್ ವೀಸಾವನ್ನೂ ಪಡೆಯಬಹುದು.

7ಲಕ್ಷ 30 ಸಾವಿರ ರಿಯಲಿಗಿಂತ ಕಡಿಮೆಯಿರದ ಸ್ವತ್ತುಗಳ ಖರೀದಿಸಲು ದೇಶದಲ್ಲಿ ವಾಸಿಸುವ ಎಲ್ಲರಿಗೂ ಸಾಧ್ಯವಾಗಲಿದೆ. ಕತರಿನ ಒಂಭತ್ತು ಸ್ಥಳಗಳಲ್ಲಿ ಸ್ವತ್ತುಗಳನ್ನು ಸ್ವಂತವಾಗಿ ಖರೀದಿಸಬಹುದಾಗಿದೆ. ಇದರ ಜೊತೆಗೆ ಇನ್ನೂ ಹದಿನಾರು ಸ್ಥಳಗಳಲ್ಲಿ 99 ವರ್ಷಗಳಿಗೆ ಬಾಡಿಗೆಗೆ ಪಡೆಯಲೂ ಸಾಧ್ಯವಾಗುವುದು.

ವೆಸ್ಟ್ ಬೇ, ಪರ್ಲ್ ಕತರ್, ಅಲ್-ಖೋರ್ ರೆಸಾರ್ಟ್, ದಫ್ನ, ಅಡ್ಮಿನ್ ಡಿಸ್ಟ್ರಿಕ್ಟ್ – 61, ಉನೈಸ, ಲುಸೈಲ್, ಅಲ್-ಖರೀಜ್, ಜಬಲ್ ತೈಲಬ ಮುಂತಾದ ಸ್ಥಳಗಳಲ್ಲಿ ವ್ಯಕ್ತಿಯು ಖಾಸಗಿಯಾಗಿ ಆಸ್ತಿಗಳನ್ನು ಖರೀದಿಸಬಹುದು. ಮುಶೈರಬ್, ಫರೀಜ್ ಅಬ್ದುಲ್ ಅಝೀಝ್, ದೋಹಾ ಜದೀದ್, ಅಲ್ ಗಾನಿಮ್ ಅಲ್ ಆತಿಕ್, ಅಲ್ ರಿಫಾ, ಅಲ್ ಖಿತ್ಮಿಯ ಅಲ್ ಅತಿಕ್, ಅಸ್ಲತ, ಫರೀಜ್ ಬಿನ್ ಮಹ್ಮೂದ್ – 22, 23, ರೌಳತುಲ್ ಖೈಲ್, ಮನ್ಸೂರ, ಫರೀಜ್ ಬಿನ್ ದಿರ್ಹಮ್, ನಜ್ಮ, ಉಮ್ಮ ಖುವೈಲಿನ್, ಅಲ್ ಖುಲೈಫಾತ್, ಅಲ್ ಸದ್ದ್, ಅಲ್ ಮಿರ್ಕಬಲ್ ಜದೀದ್, ಫರೀಜ್ ನಾಸಿರ್, ದೋಹ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಏರಿಯಾ ಇತ್ಯಾದಿಗಳು ವಿದೇಶೀ ಕಂಪೆನಿಗಳಿಗೆ ಮಾಲೀಕತ್ವ ಹೊಂದುವ ವ್ಯಾಪ್ತಿಯಲ್ಲಿ ಬರುವ ಸ್ಥಳಗಳು.

ಈ ಹೊಸ ನೀತಿಯು ಕತರಿನ ರಿಯಲ್ ಎಸ್ಟೇಟ್ ಕ್ಷೇತ್ರದ ಅಭಿವೃದ್ಧಿಗೂ, ಪ್ರಾದೇಶಿಕ ವ್ಯಾಪಾರ ವ್ಯವಹಾರಗಳ ಉತ್ತೇಜನಕ್ಕೂ ಕೊಡುಗೆ ನೀಡಬಹುದು. ಆ ಮೂಲಕ ಕತರಿನ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಬಹುದೆಂದು ನಿರೀಕ್ಷಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು