ಯಾರ್ಯಾರ ಮಕ್ಕಳನ್ನು ಹಣಕ್ಕೆ ಯಾರ್ಯಾರಿಗೆ ಮಾರಾಟ| ಸರಕಾರಿ ಆಸ್ಪತ್ರೆಯ ಕರ್ಮಕಾಂಡ ಬಯಲು!

docter
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಿಕ್ಕಮಗಳೂರು(12-02-2020): ತಾಯಿಯನ್ನು ಬೆದರಿಸಿ ನವಜಾತ ಶಿಶುವನ್ನು 55,000 ರೂಗಳಿಗೆ ಮಾರಾಟ ಮಾಡಿದ್ದಕ್ಕಾಗಿ ಕರ್ನಾಟಕ ಪೊಲೀಸರು ಮಂಗಳವಾರ ಸರ್ಕಾರಿ ವೈದ್ಯರು, ಇಬ್ಬರು ದಾದಿಯರು ಮತ್ತು ಮಹಿಳೆಯೊಬ್ಬರ ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಂಎಸ್‌ಡಿಎಂ ಸರ್ಕಾರಿ ಆಸ್ಪತ್ರೆಯ ಮುಖ್ಯ ಸ್ತ್ರೀರೋಗತಜ್ಞ ಬಾಲಕೃಷ್ಣ, ಇಬ್ಬರು ದಾದಿಯರಾದ ರೇಷ್ಮಾ ಮತ್ತು ಶೋಭಾ ವಿರುದ್ಧ ಕೇಸ್ ದಾಖಲಾಗಿದೆ. ಆಸ್ಪತ್ರೆಯ ಆಡಳಿತಾಧಿಕಾರಿ ದೂರು ನೀಡಿದ ನಂತರ ಕೊಪ್ಪಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾಲಕೃಷ್ಣ ಮತ್ತು ಇಬ್ಬರು ದಾದಿಯರು ನವಜಾತ ಬಾಲಕಿಯನ್ನು ಶೃಂಗೇರಿಯ ಪ್ರೇಮಾ ಎಂಬ ಮಹಿಳೆಗೆ 55,000 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಮಕ್ಕಳ ಹಕ್ಕು ಮತ್ತು ಕಲ್ಯಾಣ ಸಮಿತಿಯ ತನಿಖೆಯಲ್ಲಿ ತಿಳಿದುಬಂದಿದೆ.

ಮಾರ್ಚ್ 14 ರ ರಾತ್ರಿ, ಶಿವಮೊಗ್ಗದ ತೀರ್ಥಹಳ್ಳಿಯ ನಿವಾಸಿ 20 ವರ್ಷದ ಕಲ್ಪನಾಳನ್ನು ಹೆರಿಗೆಗೆ ಚಿಕ್ಕಮಗಳೂರಿನ ಕೊಪ್ಪದಲ್ಲಿರುವ ಆಸ್ಪತ್ರೆಗೆ ಕರೆತರಲಾಯಿತು. ಕಲ್ಪನಾ ಅವಿವಾಹಿತಳಾಗಿದ್ದು, ವೈದ್ಯರು ಆಕೆಯನ್ನು ಬೆದರಿಸಿ ಮಗುವನ್ನು ಮಾರಾಟಮಾಡಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು