25,000ಕ್ಕೆ ಎಂಎಲ್ ಎ ಟಿಕೆಟ್: ಅರ್ಜಿ ಆಹ್ವಾನಿಸಿದ ಡಿಎಂಕೆ

dmk
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ(16-02-2021): ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸುವಂತೆ ದ್ರಾವಿಡ ಮುನ್ನೇಟ್ರಾ ಕಝಗಂ(ಡಿಎಂಕೆ) ಪ್ರಕಟಣೆಯಲ್ಲಿ ತಿಳಿಸಿದೆ.

ಟಿಕೆಟ್ ಆಕಾಂಕ್ಷಿಗಳು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು  ಫೆಬ್ರವರಿ 17 ರಿಂದ 24 ರವರೆಗೆ ಸಲ್ಲಿಸಬಹುದು ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಪ್ರಕಟಿಸಿದರು. ಸಾಮಾನ್ಯ ಕ್ಷೇತ್ರಕ್ಕೆ ಶುಲ್ಕ 25,000 ರೂ.  ಮಹಿಳೆಯರಿಗೆ ಮತ್ತು ಕಾಯ್ದಿರಿಸಿದ ವಿಭಾಗಗಳಿಗೆ 15,000 ರೂ. ಅರ್ಜಿ ಮೊತ್ತವನ್ನು ಪಾವತಿಸಬೇಕೆಂದು ಡಿಎಂಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಎಂಕೆ ಸದಸ್ಯರೊಬ್ಬರು ಅರ್ಜಿ ಸಲ್ಲಿಸಿದ್ದ ಕ್ಷೇತ್ರವನ್ನು ಮೈತ್ರಿ ಪಕ್ಷಕ್ಕೆ ನೀಡಿದರೆ ಹಣವನ್ನು ನಂತರ ಹಿಂದಿರುಗಿಸಲಾಗುತ್ತದೆ ಎಂದು ಅವರು ಹೇಳಿದರು.

ಮುಂಬರುವ ತಮಿಳುನಾಡು ಚುನಾವಣೆಗೆ ಡಿಎಂಕೆ ಮತ್ತು ಅದರ ಪ್ರಮುಖ ಮೈತ್ರಿ ಪಾಲುದಾರ ಕಾಂಗ್ರೆಸ್ ನಡುವಿನ ಸ್ಥಾನ ಹಂಚಿಕೆ ಸೂತ್ರವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಈ ಮಧ್ಯೆ ಆಕಾಂಕ್ಷಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು