ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳ ರಾಜ್ಯಾದ್ಯಂತ ಮಂಗಳವಾರದಿಂದಲೇ ವೃತಾರಂಭ | ದ.ಕ ಜಿಲ್ಲೆಯ ಖಾಝಿದ್ವಯರು, ಉಡುಪಿಯ ಖಾಝಿ, ಕೋಝಿಕೋಡ್ ಮತ್ತು ದಕ್ಷಿಣ ಕೇರಳ ಖಾಝಿಗಳ ಏಕಾಭಿಪ್ರಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು: ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಖಾಝಿದ್ವಯರಾದ ತ್ವಾಕಾ ಮುಸ್ಲಿಯಾರ್ ಹಾಗೂ ಸಯ್ಯಿದ್ ಕುರ್ರತುಸ್ಸಾದಾತ್ ತಂಙಳ್ ನಾಳೆಯೇ (ಎಪ್ರಿಲ್ 13) ರಮಾಳಾನ್ ತಿಂಗಳು ಆರಂಭವಾಗಲಿದೆಯೆಂದು ಘೋಷಿಸಿರುತ್ತಾರೆ.

ಉಡುಪಿ:

ಹಾಗೆಯೇ ಉಡುಪಿಯ ಖಾಝಿ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೂಡಾ ನಾಳೆಯೇ ಉಪವಾಸವೆಂದು ತಿಳಿಸಿರುತ್ತಾರೆ.

ಕೇರಳ:

ಕೋಝಿಕ್ಕೋಡಿನ ಜಮಾಲುಲ್ಲೈಲಿ ತಂಙಳ್ ಹಾಗೂ ದಕ್ಷಿಣ ಕೇರಳದ ವಿಪಿ ಸುಹೈಬ್ ಮೌಲವಿಯೂ ನಾಳೆಯಿಂದಲೇ ಉಪವಾಸವೆಂಬುದಕ್ಕೆ ಅಂಗೀಕಾರ ನೀಡಿರುತ್ತಾರೆ.

ಮಿಕ್ಕುಳಿದ ಕರ್ನಾಟಕದ ಮತ್ತು ಭಾರತ ಒಕ್ಕೂಟದ ಪ್ರದೇಶಗಳು:

ಕೇರಳ ರಾಜ್ಯ, ಕರ್ನಾಟಕದ ದ.ಕ ಮತ್ತು ಉಡುಪಿ ಜಿಲ್ಲೆಗಳ ಹೊರತಾದ ಕರ್ನಾಟಕದ ಇತರ ಪ್ರದೇಶಗಳು ಹಾಗೂ ಭಾರತ ಒಕ್ಕೂಟದಾದ್ಯಂತ ಚಂದ್ರನು ಗೋಚರವಾಗದ ಹಿನ್ನೆಲೆಯಲ್ಲಿ ಎಪ್ರಿಲ್ 14 ಬುಧವಾರವೇ ರಮದಾನ್ ತಿಂಗಳು ಆರಂಭವಾಗಲಿದೆಯೆಂದು ತಿಳಿದು ಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು