6 ಕೋಟಿ ವರ್ಷ ಹಳೆಯ ಡೈನೋಸಾರ್ ಮೊಟ್ಟೆಯಲ್ಲಿ ಸಂರಕ್ಷಿತ ಭ್ರೂಣ ಪತ್ತೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೀನಾದ ದಕ್ಷಿಣ ಭಾಗದಲ್ಲಿರುವ ಗಂಝೌ ಪ್ರಾಂತ್ಯದ ಕಲ್ಲುಬಂಡೆಗಳ ನಡುವೆ ದೊರೆತ ಡೈನೋಸಾರ್ ಮೊಟ್ಟೆಯ ಒಳಗೆ ಭ್ರೂಣವನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ವಿಜ್ಞಾನ ಲೋಕದಲ್ಲಿ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ. ಈ ಮೊಟ್ಟೆಯು 72 ರಿಂದ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಈ ಭ್ರೂಣ ಇದ್ದ ಸ್ಥಿತಿ ವಿಜ್ಞಾನಿಗಳಲ್ಲಿ ಸಾಕಷ್ಟು ಆಸಕ್ತಿ ಮೂಡಿಸಿದೆ. ಭ್ರೂಣದ ತಲೆಯು ಅದರ ದೇಹದ ಅಡಿಯಲ್ಲಿ ಇತ್ತು. ಅದರ ಕಾಲುಗಳು ಎರಡೂ ಬದಿಗೆ ಹಿಂದಕ್ಕೆ ಚಾಚಿಕೊಂಡಿದ್ದು, ಮೊಟ್ಟೆಯ ತುದಿಯವರೆಗೂ ಇವೆ ಎಂದು ಸಂಶೋಧಕರ ತಂಡ ತಿಳಿಸಿದೆ.

ಬೇಬಿ ಯಿಂಗ್ಲಿಯಾಂಗ್ ಪತ್ತೆಯಿಂದ ನಮ್ಮಲ್ಲಿ ಕೌತುಕ ಹೆಚ್ಚಿದೆ. ಅದು ಇಷ್ಟು ವರ್ಷಗಳ ಕಾಲ ಅತ್ಯದ್ಭುತ ಸ್ಥಿತಿಯಲ್ಲಿ ಸಂರಕ್ಷಿತವಾಗಿತ್ತು. ಡೈನೋಸಾರ್‌ಗಳ ಬೆಳವಣಿಗೆ ಮತ್ತು ಮರು ಸಂತಾನೋತ್ಪತ್ತಿಯ ಕುರಿತು ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯವಾಗಲಿದೆ. ಡೈನೋಸಾರ್ ಭ್ರೂಣ ಮತ್ತು ಕೋಳಿಯ ಭ್ರೂಣಗಳು ಮೊಟ್ಟೆಯ ಒಳಗೆ ಒಂದೇ ರೀತಿ ಇರುವುದು ಆಸಕ್ತಿಕರವಾಗಿದೆ’ ಎಂದು ಬರ್ಮಿಂಗ್‌ಹ್ಯಾಮ್ ವಿವಿಯ ಪಿಎಚ್‌ಡಿ ಸಂಶೋಧಕಿ ಫಿಯಾನ್ ವೈಸುಮ್ ಮಾ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು