ಫರಂಗಿಪೇಟೆ; ಹಲ್ಲೆಗೊಳಗಾಗಿದ್ದ ಬಿಜೆಪಿ ಮುಖಂಡನನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮುಸ್ಲಿಮ್ ರಿಕ್ಷಾ ಚಾಲಕ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಂಟ್ವಾಳ(29/10/2020); ನಿನ್ನೆ ಫರಂಗಿಪೇಟೆಯಲ್ಲಿ ಪೋಟೋಗ್ರಾಫರ್ ಹಾಗೂ ಬಿಜೆಪಿ ಮುಖಂಡ ದಿನೇಶ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ಹಲ್ಲೆಗೈದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದ ಅಬ್ದುಲ್ ರಶೀದ್ ಪಾವೂರ್ ಅವರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಿನ್ನೆ ರಾತ್ರಿ 8ಗಂಟೆಗೆ ದಿನೇಶ್ ಶೆಟ್ಟಿಯವರನ್ನು ಅವರ ಸ್ಟುಡಿಯೋದಲ್ಲಿ ದುಷ್ಕರ್ಮಿಗಳು ಕೊಲೆಯತ್ನ ನಡೆಸಿ ಪರಾರಿಯಾಗಿದ್ದರು. ಈ ವೇಳೆ ಲಕ್ಷ್ಮಣ ಎಂಬವರ ಮೂಲಕ ಸುದ್ದಿ ತಿಳಿದ ರಶೀದ್ ಕೂಡಲೇ ಸ್ಟುಡಿಯೋಗೆ ಧಾವಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ದಿನೇಶ್ ಶೆಟ್ಟಿಯವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ರಿಕ್ಷಾ ಚಾಲಕರಾದ ಅಬ್ದುಲ್ ರಶೀದ್ ಪಾವೂರು ಅವರು ಧರ್ಮ ನೋಡದೆ ಗಾಯಗೊಂಡು ಬಿದ್ದಿದ್ದ ದಿನೇಶ್ ಅವರ ಪ್ರಾಣ ಉಳಿಸಿದ್ದಾರೆ. ಅವರ ಮಾನವೀಯತೆಗೆ ಇಡೀ ತಾಲೂಕಿನಾದ್ಯಂತ ವಿವಿಧ ಧರ್ಮದ ಜನರು ಶ್ಲಾಘಿಸುತ್ತಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು