ನಾಗಾಲ್ಯಾಂಡ್(28-11-2020): ವಜ್ರಕ್ಕಾಗಿ ಜನರ ಗುಂಪು ಗ್ರಾಮವೊಂದರಲ್ಲಿ ಅಗೆಯುತ್ತಿರುವ ಕುರಿತು ವಿಡಿಯೋ ವೈರಲ್ ಆಗಿದೆ.
ನಾಗಾಲ್ಯಾಂಡ್ ಮಾನ್ ಜಿಲ್ಲೆಯ ವಾಂಚಿಂಗ್ ಎಂಬಲ್ಲಿ ಇತ್ತೀಚೆಗೆ ಕೆಲವರಿಗೆ ಹೊಳೆಯುವ ಕಲ್ಲುಗಳು ಸಿಕ್ಕಿದೆ. ಇದು ಎಲ್ಲರಿಗೂ ತಿಳಿದು ಬಂದಿದ್ದು, ಗ್ರಾಮಕ್ಕೆ ಸರತಿ ಸಾಲಿನಲ್ಲಿ ಜನರು ಬಂದು ವಜ್ರಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದಾರೆ.
ಜನರು ಹರಳುಗಳನ್ನು ಅಂಗೈಯಲ್ಲಿ ಹಿಡಿದು ತೋರಿಸುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಸೂಚನೆಯಂತೆ ಭೂವಿಜ್ಞಾನಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಲು ಮುಂದಾಗಿದೆ.