ನವದೆಹಲಿ(24-11-2020): ಪ್ರಸ್ತುತ ಭಾರತದಲ್ಲಿ ಪುರುಷರಲ್ಲಿ ಅರ್ಧಕ್ಕಿಂತ ಹೆಚ್ಚು ಮತ್ತು 20 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮೂರನೇ ಎರಡರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಮಧುಮೇಹವನ್ನು ಬೆಳೆಸಿಕೊಳ್ಳಬಹುದು, ಅಂತಹ ಹೆಚ್ಚಿನ ಪ್ರಕರಣಗಳು ಟೈಪ್ 2 ಮಧುಮೇಹಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಡಯಾಬೆಟೊಲಾಜಿಯಾ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನೆಯು ಯಾವುದೇ ವಯಸ್ಸಿನ ಭಾರತದ ನಗರದ ನಿವಾಸಿ ತಮ್ಮ ಜೀವಿತಾವಧಿಯಲ್ಲಿ ಮಧುಮೇಹಕ್ಕೆ ಒಳಗಾಗುವ ಸಂಭವನೀಯತೆಯನ್ನು ಅಂದಾಜು ಮಾಡಿದೆ.
ನವದೆಹಲಿಯ ಸೆಂಟರ್ ಫಾರ್ ಕ್ರೋನಿಕ್ ಡಿಸೀಸ್ ಕಂಟ್ರೋಲ್ (ಸಿಸಿಡಿಸಿ) ಸೇರಿದಂತೆ ವಿಜ್ಞಾನಿಗಳ ಪ್ರಕಾರ, ದೇಶವು ಈಗಾಗಲೇ ಮಧುಮೇಹಕ್ಕೆ ಗಮನಾರ್ಹ ಪ್ರಮಾಣದಲ್ಲಿ ಜನರು ತುತ್ತಾಗಿದ್ದಾರೆ. ಪ್ರಸ್ತುತ 77 ದಶಲಕ್ಷಕ್ಕೂ ಹೆಚ್ಚಿನ ವಯಸ್ಕರು ಈ ಸ್ಥಿತಿಯಿಂದ ಬಳಲುತ್ತಿದ್ದಾರೆ, ಮತ್ತು ಈ ಸಂಖ್ಯೆ ಬಹುತೇಕ 2045 ರ ವೇಳೆಗೆ ದ್ವಿಗುಣ ಅಂದರೆ 134 ದಶಲಕ್ಷಕ್ಕೆ ಹೆಚ್ಚಳವಾಗುವ ನಿರೀಕ್ಷೆಯಿದೆ.
ಭಾರತದಾದ್ಯಂತ ನಗರ, ಕೇಂದ್ರಗಳು ವೇಗವಾಗಿ ಬೆಳೆಯುತ್ತಿರುವುದರಿಂದ, ಆಹಾರದ ಗುಣಮಟ್ಟ ಕಡಿಮೆಯಾಗುವುದು ಮತ್ತು ದೈಹಿಕ ಚಟುವಟಿಕೆಯ ಮಟ್ಟ ಕಡಿಮೆಯಾಗುವುದು ಇವೆಲ್ಲವೂ ಈ ಗುಪ್ತ ಸಾಂಕ್ರಾಮಿಕಕ್ಕೆ ಕಾರಣವಾಗಿವೆ ಎಂದು ಸಂಶೊಧನೆ ತಿಳಿಸಿದೆ.