ಬೆಂಗಳೂರು(01-11-2020): ಬಾಬರಿ ಮಸೀದಿ ಧ್ವಂಸದ ಬಗ್ಗೆ ವಿಡಿಯೋ ಸಾಕ್ಷ್ಯಾಗಳು ಇದ್ದರೂ ಆರೋಪಿಗಳು ಖುಲಾಸೆಗೊಂಡರು ಎಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಹೆಚ್ ಡಿ ದೇವೇಗೌಡರು ಪ್ರತಿಕ್ರಿಯಿಸಿದ್ದು, ತೀರ್ಪನ್ನು ಅವಾಸ್ತವ ಎಂದು ಹೇಳಿದ್ದಾರೆ.
ಮುಸ್ಲಿಮರೇ ಹೆಚ್ಚಾಗಿರುವ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ದೇವೇಗೌಡ,1 ಲಕ್ಷಕ್ಕೂ ಅಧಿಕ ಜನರ ಮುಂದೆ ಮಸೀದಿಯನ್ನು ಕೆಡವಿದ್ದಾಗ, ಈ ಬಗ್ಗೆ ವಿಡಿಯೊ ಸಾಕ್ಷಿಗಳೇ ಇದ್ದಾಗಲೂ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಇದು ದೇಶದ ಪರಿಸ್ಥಿತಿ ಎಂದು ಹೇಳಿದ್ದಾರೆ.
ಘಟನೆಗೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಕಾರಣ, ರಾಜೀವ್ ಗಾಂಧಿ ಸರ್ಕಾರದಲ್ಲಿ ಬೂಟಾ ಸಿಂಗ್ ಅವರು ಗೃಹ ಸಚಿವರಾಗಿದ್ದಾಗ ಮಸೀದಿಯ ಬಾಗಿಲು ತೆರೆದರು ಎಂದು ಆರೋಪಿಸಿದರು. 1992ರ ಡಿಸೆಂಬರ್ 6ರಂದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಾಬ್ರಿ ಮಸೀದಿಯನ್ನು ಕೆಡವಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಗುಜರಾತ್ ಗೋಧ್ರಾ ಹತ್ಯಾಕಾಂಡದಲ್ಲಿ ಬಲಿಯಾಗಿದ್ದವರ ಕುಟುಂಬಗಳನ್ನು ಭೇಟಿ ಮಾಡಲಿಲ್ಲ. ನಾನು ಹೋಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ ಎಂದು ದೇವೇಗೌಡ ಹೇಳಿದ್ದಾರೆ.