ದೇವಸ್ಥಾನದ ಆವರಣದಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ಅನುಮತಿ ನಿರಾಕರಿಸಿದ ‘ದೇವಸ್ವಮ್ ಮಂಡಳಿ’

Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುವನಂತಪುರಂ: ದೇವಸ್ಥಾನದ ಆವರಣದಲ್ಲಿ ಆರೆಸ್ಸೆಸ್ಸಿನ ಚಟುವಟಿಕೆ ನಡೆಸಲು ತಿರುವಾಂಕೂರು ದೇವಸ್ವಮ್ ಮಂಡಳಿಯು ಅನುಮತಿ ನಿರಾಕರಿಸಿದೆ.

ತಿರುವಾಂಕೂರು ದೇವಸ್ವಮ್ ಮಂಡಳಿಯ ಅಧೀನದಲ್ಲಿ ಒಟ್ಟು 1242 ದೇವಸ್ಥಾನಗಳಿವೆ. ಎಲ್ಲಾ ದೇವಸ್ಥಾನಗಳಿಗೂ ಸುತ್ತೋಲೆ ಬಂದಿದ್ದು, ಆರೆಸ್ಸೆಸ್ ಕಾರ್ಯಕರ್ತರಿಗೆ ದೈಹಿಕ ತರಬೇತಿಗೆ ಅವಕಾಶ ಕೊಟ್ಟವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಲಾಗಿದೆ.

ತನಿಖಾಧಿಕಾರಿಗಳ ಭೇಟಿಯ ವೇಳೆಯಲ್ಲಿ ದೇವಸ್ವಮ್ ಮಂಡಳಿಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಆರೆಸ್ಸೆಸ್ ಶಾಖೆಗಳ ದೈಹಿಕ ಕಸರತ್ತುಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ದೇವಸ್ಥಾನವನ್ನು ರಾಜಕೀಯ ಉದ್ಧೇಶಗಳಿಗಾಗಿ ಬಳಸುವಂತಿಲ್ಲ. ದೇವಾಲಯದ ಆವರಣದಲ್ಲಿ ಆಯುಧ ಬಳಸಿಯೋ, ಬಳಸದೆಯೋ ನಡೆಸುವ ಯಾವುದೇ ರೀತಿಯ ದೈಹಿಕ ಕಸರತ್ತುಗಳನ್ನು ನಡೆಸಲು ಅವಕಾಶವಿಲ್ಲ  ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು