ದೇಶದಲ್ಲಿ ಮೊದಲ ಬಾರಿ ಕೊರೊನಾ ದಾಖಲೆ: 24 ಗಂಟೆಯಲ್ಲಿ 2 ಲಕ್ಷ ಹೊಸ ಕೊರೊನಾ ಕೇಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಬ್ಬರವಾಗಿ ಹರಡುತ್ತಿದೆ. ಎರಡನೇ ಅಲೆಯಿಂದ ದೇಶದ ಜನ ಭಯಾನಕ ಸ್ಥಿತಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳ ಸಂಖ್ಯೆ ಮಿತಿ ಮೀರಿ ಏರಿಕೆಯಾಗುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 2,00,739 ಹೊಸ COVID19 ಪ್ರಕರಣಗಳು ಕಂಡುಬಂದಿವೆ. 93,528 ಡಿಸ್ಚಾರ್ಜ್ ಮತ್ತು 1,038 ಸಾವು ಆಗಿರುವ ಕುರಿತು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಕೊರೊನಾ ಹೊಸ ಕೇಸ್ ಗಳನ್ನು ಕಂಡುಬಂದಿರುವುದು ದಾಖಲೆ ಆಗಿದೆ ಎಂದು ಹೇಳಲಾಗಿದೆ.

ದೇಶಾದ್ಯಂತ ಕೋವಿಡ್ ಲಸಿಕೆಯ ಅಭಿಯಾನ ಈಗಾಗಲೇ ಜಾರಿಯಲ್ಲಿದೆ. ಕೆಲವಡೆ ಜನರು ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ, ಇನ್ನೂ ಹಲವು ಕಡೆಗಳಲ್ಲಿ ಲಸಿಕೆ ಕೊರತೆಯಿಂದ ಪರದಾಟ ನಡೆಸುತ್ತಿದ್ದಾರೆ. ಕೊರೊನಾ ವೈರಸ್ ಗೆ ತತ್ತರಿಸಿದ ಹಲವು ರಾಜ್ಯದಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಿ ಪರೀಕ್ಷೆಗಳನ್ನು ರದ್ದುಗೊಳಿಸಿವೆ, ದೆಹಲಿ, ಮಹಾರಾಷ್ಟ್ರ ಗಳಲ್ಲಿ ನೈಟ್ ಕರ್ಫ್ಯೂ ,ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು