ದೇಶದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ, 80 ಕೋಟಿ ಜನರಿಗೆ ನವೆಂಬರ್ ತನಕ ಫ್ರೀ ರೇಷನ್ : ಪ್ರಧಾನಿ ಮೋದಿ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕಳೆದ ಬಾರಿ ಕೋವಿಡ್ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ 8 ತಿಂಗಳ ಕಾಲ ದೇಶದ ಜನರಿಗೆ ಉಚಿತವಾಗಿ ಆಹಾರಧಾನ್ಯ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿಯಲ್ಲಿ ಈ ವರ್ಷವೂ ಕೂಡ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ದೇಶದ 80 ಕೋಟಿ ಜನರಿಗೆ ನವಂಬರ್ (ದೀಪಾವಳಿ) ವರೆಗೂ ಉಚಿತವಾಗಿ ಆಹಾರಧಾನ್ಯ ವಿತರಿಸಲಾಗುವುದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇಂದು ಸಂಜೆ 5ಗಂಟೆಗೆ ದೇಶದ ಜನರನ್ನುದ್ದೇಶಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿ ಅವರು ಈ ವಿಷಯನ್ನು ತಿಳಿಸಿದ್ದಾರೆ. ದೇಶದ ಯಾರೊಬ್ಬರೂ ನಾಗರಿಕರು ಹಸಿವಿನಿಂದ ಬಳಲಬಾರದು. ಬಡವರು ಹಸಿವಿನಿಂದ ಮಲಗಬಾರದು. ಹೀಗಾಗಿ ಈ ಹಿಂದೆ ಮೇ ಮತ್ತು ಜೂನ್ ಎರಡು ತಿಂಗಳು ಉಚಿತ ಆಹಾರ ಧಾನ್ಯ ನೀಡಲಾಗುವುದು ಎಂದು ಹೇಳಿದ್ದೇವೆ, ಈಗ ಅದನ್ನೇ ವಿಸ್ತರಿಸಿ ಬರುವ ನವೆಂಬರ್ ವರೆಗೂ ಅಂದರೆ ದೀಪಾವಳಿವರೆಗೆ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.

ಕರೊನಾ ನಿಯಂತ್ರಣದಲ್ಲಿ ಲಸಿಕೆಯ ಪಾತ್ರ ಪ್ರಮುಖವಾದದ್ದು ಎಂದು ಪ್ರತಿಪಾದಿಸಿರುವ ಪ್ರಧಾನಿ ಮೋದಿ, ಇದೀಗ ಲಸಿಕೆ ವಿತರಣೆ ಸಂಬಂಧ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಜನವರಿ 16 ರಿಂದ ದೇಶದಲ್ಲಿ ಲಸಿಕೆ ಅಭಿಯಾನ ಆರಂಭಿಸಿದ್ದೇವೆ, ಲಸಿಕೆ ಆರಂಭದಿಂದ ದೇಶದ ಜನರಿಗೆ ಹೆಚ್ಚಿನ ಆತ್ಮಸ್ಥೈರ್ಯ ಬರಲು ಸಾಧ್ಯವಾಗಿದೆ. ಇದರಿಂದ ನಾವು ಮುಂದುವರಿಯುತ್ತಿದ್ದೇವೆ. ಲಸಿಕೆಯ ಬಗ್ಗೆ ಹಲವು ಜನರು ಟೀಕಿಸಿದರು, ಟೀಕೆಗಳನ್ನು ಪ್ರಸ್ತಾಪ ಮಾಡಿದ ಮೋದಿ ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ. 50 ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ ವಿತರಣೆ ಕುರಿತು ಒಂದಷ್ಟು ಟೀಕೆಗಳು ವ್ಯಕ್ತವಾದ್ದರಿಂದ ಲಸಿಕೆ ವಿತರಣೆಯ ಪೂರ್ತಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊರಲಿದ್ದು, ಶೇ.75% ಪ್ರತಿಶತ ಲಸಿಕೆ ಕೇಂದ್ರ ಸರ್ಕಾರ ನೀಡಲಿದೆ, ಖಾಸಗಿ ಆಸ್ಪತ್ರೆಯಲ್ಲಿ ಕೂಡ ಶೇ.25% ಲಸಿಕೆಯನ್ನು ರೂ.150 ದರದಲ್ಲಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ. ಇನ್ನೆರಡು ವಾರದಲ್ಲಿ ಆ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದರು.

ಕೋವಿಡ್ ಲಸಿಕೆ ಅಭಿಯಾನದಲ್ಲಿ ಇಡೀ ಜಗತ್ತಿನಲ್ಲಿಯೇ ಭಾರತ ಮುಂದಿದೆ, ಇಲ್ಲಿಯವರೆಗೆ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ, ಹಿಂದಿನ ಸರ್ಕಾರಗಳು ಬೇರೆ ದೇಶದಲ್ಲಿ ಕೆಲಸ ಆರಂಭವಾದ ದಶಕದ ನಂತರ ಭಾರತದಲ್ಲಿ ಪ್ರಾರಂಭವಾಗುತ್ತಿತ್ತು, ಆದರೆ ನಾವು ತೀವ್ರ ಗತಿಯಲ್ಲಿ ಜನತೆಗೆ ಲಸಿಕೆ ನೀಡಲು ಮುಂದಾಗಿದ್ದೇವೆ. ಇದರಿಂದ ಹಲವಾರು ಜನರ ಪ್ರಾಣ ಉಳಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು