ಮಾತಿನ ಸಮಸ್ಯೆಯಿದ್ದ ಬಾಲಕ ಅಮೆರಿಕದ ಅಧ್ಯಕ್ಷ ಗಾಧಿವರೆಗೆ…ಬಿಡೆನ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

bidhen
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಾಗಲಕೋಟೆ(08-11-2020):  ಅಮೆರಿಕದ 46 ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೋಕ್ರೆಟಿಕ್ ಪಕ್ಷದ ಜೋ ಬಿಡೆನ್ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ನ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಸುಮಾರು ಅರ್ಧ ಶತಮಾನದಿಂದ ಸಾರ್ವಜನಿಕರ ಗಮನದಲ್ಲಿದ್ದಾರೆ. 1942 ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಜನಿಸಿದ 77 ವರ್ಷದ ಇವರು 1972 ರಲ್ಲಿ ಮೊದಲ ಬಾರಿಗೆ ಸೆನೆಟ್ಗೆ ಆಯ್ಕೆಯಾಗಿದ್ದರು. ಅದರ ನಂತರ ಆರು ಬಾರಿ ಮರು-ಚುನಾಯಿತರಾದರು. ಒಟ್ಟಾರೆ 36 ವರ್ಷಗಳ ಕಾಲ ಯುಎಸ್ ಸೆನೆಟ್ನಲ್ಲಿ ಕಳೆದರು.

ಬಿಡೆನ್ ಮೊದಲು 1988 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೊದಲು ಸ್ಪರ್ಧಿಸಿದ್ದರು, ಮತ್ತೆ 2008 ರಲ್ಲಿ ಸ್ಪರ್ಧಿಸಿದ್ದರು. ಒಬಾಮಾ ಆಡಳಿತದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಬಿಡೆನ್ ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲಾ ಫುಟ್ಬಾಲ್ ತಂಡದಲ್ಲಿ ಆಡಿದ್ದರು. ಬಿಡೆನ್ ಬಳಿ ಎರಡು ಜರ್ಮನ್ ಶೆಫರ್ಡ್ ಇದೆ. ಬಿಡೆನ್ ಕಾರಿನ ಕ್ರೇಜ್ ತುಂಬಾ ಇದೆ. ಜೋ ಬಿಡೆನ್ ಮಹಿಳೆಯರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ಬರೆದು ಮೆಚ್ಚುಗೆ ಪಡೆದಿದ್ದರು. ಡಿಸೆಂಬರ್ 1972 ರಲ್ಲಿ, ಬಿಡೆನ್ ಅವರ ಪತ್ನಿ ನೀಲಿಯಾ ಮತ್ತು ಅವರ ಒಂದು ವರ್ಷದ ಮಗಳು ಆಮಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಕಾರು ಅಪಘಾತದಲ್ಲಿ ತನ್ನ ಹೆಂಡತಿ ಮತ್ತು ಮಗಳನ್ನು ಕಳೆದುಕೊಂಡ ನಂತರ, ಬಿಡೆನ್ ಸೆನೆಟ್ ನಾಯಕನಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಡೆನ್ ಗೆ ಹುಟ್ಟಿನಿಂದ ಮಾತಿನ ಸಮಸ್ಯೆಯಿತ್ತು. ಅವರಿಗೆ ಒಂದೊಂದು ಶಬ್ಧವನ್ನು ಎರಡೆರಡು ಬಾರಿ ಹೇಳುವ ಅಭ್ಯಾಸವಿತ್ತು. 29 ನೇ ವಯಸ್ಸಿನಲ್ಲಿ, ಯುನೈಟೆಡ್ ಸ್ಟೇಟ್ಸ್ ಸೆನೆಟ್ಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿಗಳಲ್ಲಿ ಬಿಡೆನ್ ಒಬ್ಬರಾಗಿದ್ದರು. ಅವರು ಯುಎಸ್ ಇತಿಹಾಸದಲ್ಲಿ ಎರಡನೇ ಕ್ಯಾಥೊಲಿಕ್ ಅಧ್ಯಕ್ಷರಾಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು