ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು| ಕರಾಳ ಶಾಸನ ಹಿಂಪಡೆಯಲು ಇನ್ನೆಷ್ಟು ಬಲಿ ಬೇಕು?

formrse
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(08-07-2021): ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜಿಂದ್ ಮೂಲದ 52 ವರ್ಷದ ರೈತ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಪೊಲಿಸರು ತಿಳಿಸಿದ್ದು, ಕಾಯ್ದೆಯನ್ನು ವಿರೋಧಿಸಿ ರೈತರು ಪ್ರಾಣ ತ್ಯಾಗ ಮಾಡುತ್ತಿದ್ದರೂ ಸರಕಾರ ಕ್ಯಾರೇ ಮಾಡದಿರುವುದು ವಿಪರ್ಯಾಸವಾಗಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಕರಮ್‌ವೀರ್ ಸಿಂಗ್ ಆತ್ಮಹತ್ಯೆ  ಮಾಡಿಕೊಂಡ ರೈತ, ಟಿಕ್ರಿ ಗಡಿಯ ಸಮೀಪದ ಉದ್ಯಾನವನವೊಂದರಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ.

ಜಿಂದ್‌ನ ಸಿಂಗ್ವಾಲ್ ಗ್ರಾಮದವರಾದ ರೈತ  ಪತ್ರವನ್ನು ಬರೆದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂದು  ಬಹದ್ದೂರ್‌ಗರ್ ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿಜಯ್ ಕುಮಾರ್ ತಿಳಿಸಿದ್ದಾರೆ.

ಆತ್ಮೀಯ ರೈತ ಸಹೋದರರೇ, ಮೋದಿ ಸರ್ಕಾರವು ದಿನಾಂಕವನ್ನು ಮುಂದೂಡುತ್ತಿದೆ. ಈ ಕರಾಳ ಕೃಷಿ ಕಾನೂನುಗಳನ್ನು ಯಾವಾಗ ಹಿಂದಕ್ಕೆ ತರಲಾಗುವುದು ಎಂದು ಯಾರಿಗೂ ತಿಳಿದಿಲ್ಲ ಎಂದು ರೈತ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈಗಾಗಲೇ 200ಕ್ಕೂ ಅಧಿಕ ರೈತರು ಕೃಷಿ ಕಾಯ್ದೆ ಪ್ರತಿಭಟನೆ ವೇಳೆ ವಿಭಿನ್ನ ಕಾರಣಗಳಿಂದ ಮೃತಪಟ್ಟಿದ್ದಾರೆ. ಇದೀಗ ಕಾಯ್ದೆ ವಿರೋಧಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು