ದೆಹಲಿ ಚಲೋ: ಪಟ್ಟು ಬಿಡದೆ ದೆಹಲಿಯತ್ತ ಮುನ್ನುಗ್ಗಿದ ರೈತರು..

delhi chalo
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಂಡೀಗಢ(27-11-2020): ಕೃಷಿ ಕಾಯ್ದೆಯನ್ನು ವಿರೋಧಿಸಿ ಕೇರಳ , ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ನಿಂದ ಹೊರಟ ರೈತರ ದೆಹಲಿ ಚಲೋ ಪೊಲೀಸರ ಬಲಪ್ರಯೋಗದ ಮಧ್ಯೆಯೂ ಮುಂದವರಿದಿದೆ. ಗಡಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಭದ್ರತಾ ಪಡೆ ನಿಯೋಜನೆ ಹೊಂದಿದ್ದರೂ ಕೂಡ ಪಂಜಾಬ್ ನ ರೈತರು ದೆಹಲಿಯ ಗಡಿಭಾಗಕ್ಕೆ ತಲುಪಿದ್ದಾರೆ.

ಹರ್ಯಾಣದಲ್ಲಿ ರೈತರು ಪೊಲೀಸ್ ಬ್ಯಾರಿಕೇಡ್ ನ್ನು ಮುರಿದು ಮುನ್ನುಗ್ಗಿದ್ದಾರೆ.
ಪೊಲೀಸರು ಅಶ್ರುವಾಯು ಸಿಡಿಸಿದರೂ ಪ್ರತಿಭಟನಾಕಾರರು ಕ್ಯಾರೇ ಅನ್ನದೆ ತಮ್ಮ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ನಿನ್ನೆ ಪ್ರತಿಭಟನಾಕಾರರು ನಗರಕ್ಕೆ ಪ್ರವೇಶಿಸಬಾರದೆಂದು ದೆಹಲಿ ಪೊಲೀಸರು ಗಡಿಯಲ್ಲಿ ಭದ್ರತೆ ಹೆಚ್ಚಿಸಿದ್ದರು. ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಸಿಡಿಸಿದ್ದರು. ಆದರೆ ರೈತರು ಬಲಪ್ರಯೋಗಕ್ಕೆ ಹೆದರದೆ ಮುನ್ನುಗ್ಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು