ದೆಹಲಿ ಚಲೋ| ಜಲ ಫಿರಂಗಿ ಬಂದ್​ ಮಾಡಿ ಸಿನಿಮೀಯ ರೀತಿಯಲ್ಲಿ ಹಾರಿದ ರೈತ

delhi chalo
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(28-11-2020): ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಹೊರಟ ರೈತರನ್ನು ಪೊಲೀಸರು ಬಲಪ್ರಯೋಗವನ್ನು ಬಳಸಿ ತಡೆಯಲು ಪ್ರಯತ್ನಿಸಿದ್ದರು. ಜಲಫಿರಂಗಿ, ಅಶ್ರುವಾಯುವನ್ನು ರೈತರ ಮೇಲೆ ಪ್ರಯೋಗ ಮಾಡಿದ್ದರು. ಆದರೂ ಕ್ಯಾರೇ ಎನ್ನದೆ ರೈತರು ದೆಹಲಿಯತ್ತ ಮುನ್ನುಗ್ಗಿದ್ದರು. ಈ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ಮೈ ನಡುಕವನ್ನುಂಟು ಮಾಡಿಸುವಂತಿದೆ.

ಪ್ರತಿಭಟನಾಕಾರನೊಬ್ಬ ವಾಟರ್​ ಟ್ಯಾಂಕನ್ನು ಬಂದ್​ ಮಾಡಿದ್ದಾರೆ. ಈ ವೇಳೆ  ಪೊಲೀಸರು ಅವರನ್ನು ಬೆನ್ನಟ್ಟಲು ಪ್ರಯತ್ನಿಸಿದ್ದು, ಆತ ಸಿನಿಮೀಯ ರೀತಿಯಲ್ಲಿ ಅಲ್ಲೇ ಸಾಗುತ್ತಿದ್ದ ವಾಹನಕ್ಕೆ ಹಾರಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಹೆಚ್ಚು ಹಂಚಿಕೆಯಾಗಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು