ಹರ್ಯಾಣ(28-11-2020): ದೆಹಲಿ ಚಲೋ ಪ್ರತಿಭಟನೆ ಹೊರಟಿದ್ದ ರೈತರ ಮೇಲೆ ಹರ್ಯಾಣ ಪೊಲೀಸರು ಕೊಲೆ ಯತ್ನ, ಗಲಭೆ ಸೃಷ್ಟಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಕೇಸ್ ದಾಖಲಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಗುರ್ನಮ್ ಸಿಂಗ್ ಮತ್ತು ಇತರ ಹಲವು ರೈತರ ವಿರುದ್ಧ ಹರ್ಯಾಣ ಪೊಲೀಸರು ಐಪಿಸಿ ಸೆಕ್ಷನ್ 307, 147, 149, 186 269 ರಡಿ ಪ್ರಕರಣ ದಾಖಲಿಸಿದ್ದಾರೆ.
ಕೇಂದ್ರದ ಅವಾಸ್ತವ ಕೃಷಿ ಮಸೂದೆಯನ್ನು ವಿರೋಧಿಸಿ ದೇಶದ ವಿವಿಧ ರಾಜ್ಯಗಳಿಂದ ರೈತರು ದೆಹಲಿ ಚಲೋ ಹೊರಟಿದ್ದರು. ಗುರುವಾರ ಪ್ರತಿಭಟನಾಕಾರರ ಮೇಲೆ ಪೊಲೀಸರು, ಅಶ್ರುವಾಯು, ಜಲಫಿರಂಗಿ ಬಳಸಿ ದೆಹಲಿಗೆ ತೆರಳದಂತೆ ನಿರ್ಬಂಧಿಸಿದ್ದರು. ಇದಕ್ಕೆ ಕ್ಯಾರೇ ಎನ್ನದ ರೈತರು ದೆಹಲಿಯತ್ತ ಮುನ್ನುಗ್ಗಿದ್ದರು.