ದೆಹಲಿ(27-01-2021): ಪಶ್ಚಿಮ ದೆಹಲಿಯಲ್ಲಿ ಲಘು ಭೂಕಂಪನ ಸಂಭವಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.8 ದಾಖಲಾಗಿದೆ.
ಬೆಳಿಗ್ಗೆ 9.17 ಕ್ಕೆ ಭೂಕಂಪನ ಸಂಭವಿಸಿದ್ದು, ಪ್ರಾಣಹಾನಿ, ನಷ್ಟದ ಬಗ್ಗೆ ವರದಿಯಾಗಿಲ್ಲ. ಅಕ್ಷಾಂಶ 28.66ಎನ್ ಮತ್ತು ರೇಖಾಂಶ 77.13 ಇ 15 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ.
ಇದು ಒಂದು ಸಣ್ಣ ಭೂಕಂಪ, ಆದ್ದರಿಂದ ಎಲ್ಲೆಡೆ ನಡುಕ ಅನುಭವವಾಗಿಲ್ಲ. ಪಶ್ಚಿಮ ದೆಹಲಿಯ ಸುತ್ತಮುತ್ತಲಿನಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸೆಂಟರ್ ಫಾರ್ ಸೆಸ್ಮಾಲಜಿ (ಎನ್ಸಿಎಸ್) ನ ಮುಖ್ಯಸ್ಥ ಗೌತಮ್ ಹೇಳಿದ್ದಾರೆ.