ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ, ಕೇಸ್ ಕಡಿಮೆಯಾದರೆ ಮೇ 31ರ ನಂತರ ಅನ್ ಲಾಕ್ – ಸಿಎಂ ಕೇಜ್ರಿವಾಲ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೆಹಲಿಯಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಮತ್ತೆ ಮೇ 31ರವರೆಗೂ ವಿಸ್ತರಿಸಲಾಗಿದ್ದು, ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಮತ್ತಷ್ಟು ಕುಸಿತವಾದರೆ ಮೇ 31 ನಂತರ ‘ಅನ್ ಲಾಕ್’ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಲಾಕ್ ಡೌನ್ ವಿಸ್ತರಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಕೇಜ್ರಿವಾಲ್ , ದೆಹಲಿಯಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ನಾವು ಯುದ್ಧ ಗೆದ್ದಿಲ್ಲ, ಇನ್ನೂ ಸಂಘರ್ಷ ಮಾಡಬೇಕಾಗಿದೆ. ಹೀಗಾಗಿ ಮೇ 31ರ ಮುಂಜಾನೆ 5 ಗಂಟೆಯವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಲಾಗುತ್ತಿದೆ. ಒಂದು ವೇಳೆ ದೆಹಲಿಯಲ್ಲಿ ಇದೇ ರೀತಿ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಕುಸಿತವಾಗುತ್ತಿದ್ದರೆ ಅನ್ ಲಾಕ್ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

ದೆಹಲಿ ಸರ್ಕಾರ ಆದಷ್ಟು ಬೇಗ ಎಲ್ಲರಿಗೂ ಲಸಿಕೆ ಹಾಕಲು ಯೋಜಿಸಿದೆ, ಕೊರೊನಾ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ನಾವು ಸಾಧ್ಯವಾದಷ್ಟು ಬೇಗ ಎಲ್ಲರಿಗೂ ಲಸಿಕೆ ಹಾಕಲು ಯೋಜಿಸುತ್ತಿದ್ದೇವೆ. ಲಸಿಕೆಗಳಿಗೆ ಸಂಬಂಧಿಸಿದಂತೆ ನಾನು ದೇಶೀಯ ಮತ್ತು ವಿದೇಶಿ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ನಾವು ನಮ್ಮ ಬಜೆಟ್ ನಿಂದ ಖರ್ಚು ಮಾಡಲು ಸಿದ್ಧರಿದ್ದೇವೆ ಎಂದು ದೆಹಲಿ ಸಿಎಂ ಹೇಳಿದರು.

ಕಳೆದು ಒಂದು ತಿಂಗಳಿಂದ ದೆಹಲಿಯ ಡಾಕ್ಟರ್, ನರ್ಸ್ ಗಳು ಜೀವದ ಹಂಗು ತೊರೆದು ಕೊರೊನಾ ರೋಗದ ವಿರುದ್ಧ ಹೋರಾಡುತ್ತಿದ್ದಾರೆ, ಕೆಲವರು ಜೀವ ಕಳೆದುಕೊಂಡಿದ್ದಾರೆ, ಅವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸುವೆ, ಲಾಕ್ ಡೌನ್ ನಿಯಮಗಳನ್ನು ಪಾಲಿಸುವ ಮೂಲಕ ಕೊರೊನಾ ಕಂಟ್ರೋಲ್ ಮಾಡಲು ಸಹಕರಿಸಿದ ದೆಹಲಿಯ ಜನತೆಗೆ ಧನ್ಯವಾದಗಳು, ಇದೇ ರೀತಿ ಇನ್ನೂ ಒಂದು ವಾರ ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು ಎಂದು ದೆಹಲಿ ಜನತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು