“ನಿನ್ನ ಸಮಾಧಿ ಗುಂಡಿಯನ್ನು ಜಮ್ಮುವಿನಲ್ಲೇ ತೋಡುತ್ತೇವೆ.” ಕಥುವಾ ಸಂತ್ರಸ್ತೆಯ ಕುಟುಂಬದ ಪರ ವಾದಿಸಿದ ವಕೀಲೆಗೆ ಹಿಂದುತ್ವವಾದಿ ಗುಂಪಿನಿಂದ ಜೀವ ಬೆದರಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಮ್ಮು ಕಾಶ್ಮೀರ(21-10-2020): ಜಮ್ಮು ಕಾಶ್ಮೀರದ ಕಥುವಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ಕ್ರೂರವಾಗಿ ಕೊಲೆಗೀಡಾದ ಅಪ್ರಾಪ್ತ ಬಾಲಕಿಯ ಕುಟುಂಬದ ಪರ ವಾದಿಸಿದ ವಕೀಲೆ ದೀಪಿಕಾ ಸಿಂಗ್ ರಜಾವತಿಗೆ ಜೀವ ಬೆದರಿಕೆ ಹಾಕಲಾಗಿದೆ. ಹಿಂದುತ್ವವಾದಿ ಘೋಷಣೆಗಳನ್ನು ಕೂಗುತ್ತಾ, ವಕೀಲೆಯ ನಿವಾಸದ ಹತ್ತಿರ ಬಂದ ದುಷ್ಕರ್ಮಿಗಳೇ ಈ ಜೀವ ಬೆದರಿಕೆ ಹಾಕಿದವರು. ಸ್ವತಃ ವಕೀಲೆ ಘಟನೆಯ ವೀಡಿಯೋ ಟ್ವಿಟರಿನಲ್ಲಿ ಹಂಚಿದ್ದಾರೆ.

“ಗಮನಿಸಿ, ನನ್ನ ಮನೆಯ ಹೊರಗೆ ಸೇರಿದ ಜನರು ನನ್ನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.” ಎಂಬ ಬರಹದೊಂದಿಗೆ ವಕೀಲೆ ಈ ವೀಡಿಯೋ ಹಂಚಿದ್ದಾರೆ. ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೋಲೀಸರು ಬರುವವರೆಗೂ ಇವರ ಘೋಷಣೆಗಳು ಮುಂದುವರಿಯುತ್ತಲೇ ಇತ್ತು. ಮರುದಿನವೂ ದುಷ್ಕರ್ಮಿಗಳು ಇದನ್ನೇ ಪುನರಾವರ್ತಿಸಿದ್ದರು ಎನ್ನಲಾಗಿದೆ.

ದೀಪಿಕಾರನ್ನು ಕೊಲ್ಲುವೆವು, ದೀಪಿಕಾರ ಸಮಾಧಿ ಗುಂಡಿಯನ್ನು ಜಮ್ಮುವಿನಲ್ಲೇ ತೋಡುತ್ತೇವೆ ಎಂದೆಲ್ಲಾ ದುಷ್ಕರ್ಮಿಗಳು ಘೋಷಣೆ ಮೊಳಗಿಸಿದ್ದರು.

ದೀಪಿಕಾ ಟ್ವೀಟ್ ಮಾಡಿದ ಒಂದು ಕಾರ್ಟೂನ್ ಹಿಂದೂ ದೇವ-ದೇವತೆಗಳನ್ನು ಅವಮಾನ ಮಾಡುತ್ತವೆಯೆಂದೂ, ಆಕೆಯನ್ನು ತಕ್ಷಣವೇ ಬಂಧಿಸಬೇಕೆಂದೂ ದೊಡ್ಡ ಸೈಬರ್ ಅಭಿಯಾನವನ್ನೇ ನಡೆಸಲಾಗಿತ್ತು. ನವರಾತ್ರಿಯ ಸಮಯದಲ್ಲಿ ದೀಪಿಕಾ ಪೋಸ್ಟ್ ಮಾಡಿದ ಒಂದು ಕಾರ್ಟೂನ್ ಈ ಎಲ್ಲಾ ವಿವಾದಗಳನ್ನು ಸೃಷ್ಟಿಸಿತ್ತು. ಆ ಕಾರ್ಟೂನಿನಲ್ಲಿ ನವರಾತ್ರಿಯಂದು ದೇವತೆಯ ಕಾಲು ಮುಟ್ಟಿ ನಮಸ್ಕರಿಸಿದ ಅದೇ ವ್ಯಕ್ತಿ ಮರುದಿನ ಮಹಿಳೆಯೊಬ್ಬಳ ಕಾಲು ಹಿಡಿದು ಕಿರುಕುಳ ನೀಡುವ ದೃಶ್ಯವಿದೆ.

ವಿರೋಧಾಭಾಸ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಲಾದ ಆ ಕಾರ್ಟೂನ್, ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದಲೇ ನವರಾತ್ರಿಯಂದು ಪೋಸ್ಟ್ ಮಾಡಿರುವುದೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲೇ ದೀಪಿಕಾರನ್ನು ಬಂಧಿಸಬೇಕೆಂಬ ಹ್ಯಾಶ್‌ಟ್ಯಾಗ್ ಬಳಸಿ ಸೈಬರ್ ಅಭಿಯಾನ ನಡೆಸಿರುವುದು ಮತ್ತು ಆಕೆಯ ಮನೆಯ ಮುಂದೆ ಸೇರಿ, ಜೀವ ಬೆದರಿಕೆ ಹಾಕಿರುವುದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು