ದೀಪಾವಳಿ ಎಂದರೆ ಲಂಬಾಣಿ ಯುವತಿಯರ ಹಬ್ಬ!

Share on facebook
Share on twitter
Share on linkedin
Share on whatsapp
Share on telegram
Share on email
Share on print

-ಯಂಕಪ್ಪ ರಾಥೋಡ್ ಮುದ್ನಾಳ್

ದೀಪಾವಳಿಯು ಬರೀ ಬಾಣ, ಬಿರುಸುಗಳ ಸದ್ದಲ್ಲ. ಆದರಾಚೆಯೂ ಸಾಂಪ್ರದಾಯಿಕವಾದ ವಿಶಿಷ್ಟ ಆಚರಣೆ. ಅದರಲ್ಲೂ ಲಂಬಾಣಿ ಸಮುದಾಯದವರು ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಇನ್ನೂ ದೀಪಾವಳಿ ಹಬ್ಬವನ್ನು ಲಂಬಾಣಿ ಯುವತಿಯರ ಹಬ್ಬವೆಂದೇ ಕರೆಯುತ್ತಾರೆ.

ಬೆಟ್ಟ-ಗುಡ್ಡದಲ್ಲಿ ವಿವಿಧ ಬಗೆಯ ಹೂಗಳನ್ನ ಸಂಗ್ರಹಿಸುತ್ತಿರೋ ಯುವತಿಯರು. ಮನೆ ಮನೆಗೆ ತೆರಳಿ ಸೆಗಣಿ ಮೇಲೆ ಹೂಗಳಿಂದ ಅಲಂಕಾರ. ಬಳಿಕ ಸಾಂಪ್ರದಾಯಿಕ ಬಟ್ಟೆ ಧರಿಸಿ ವಾದ್ಯಗೋಷ್ಠಿಗೆ ಹೆಜ್ಜೆ ಹಾಕ್ತಿರೋ ಹೆಂಗೆಳೆಯರು.
ಈ ಸಾಂಪ್ರದಾಯಿಕ ವಿಶಿಷ್ಟ ಆಚರಣೆ ಕಂಡು ಬರುವುದು ಗಡಿನಾಡು ಯಾದಗಿರಿ ತಾಲೂಕಿನ ಮುದ್ನಾಳ ತಾಂಡಾ ಸೇರಿದಂತೆ ಜಿಲ್ಲೆಯ ವಿವಿಧೆಡೆ. ಬೆಳಕಿನ ಹಬ್ಬ ದೀಪಾವಳಿಯು ಲಂಬಾಣಿಗರಿಗೆ ವಿಶೇಷ ಹಾಗೂ ಸಂಭ್ರಮದ ಹಬ್ಬ.
ಆಧುನಿಕ ಭರಾಟೆಯಲ್ಲಿ ಜಾನಪದ ಸೊಗಡಿನ ಅನೇಕ ನೃತ್ಯ ಪ್ರಕಾರಗಳು, ಕಲೆಗಳು ಮರೆಯಾಗುತ್ತಿದೆ. ಆದರೆ ಲಂಬಾಣಿ ಸಮುದಾಯದವರು ಇಂದಿಗೂ ತಮ್ಮ ಸಂಪ್ರಾದಯದ ನೃತ್ಯಗಳನ್ನ ಉಳಿಸಿಕೊಂಡು ಬರುತ್ತಿರುವುದು ವಿಶೇಷ. ಹದಿನೈದು ದಿನಗಳ ಕಾಲ ತಾಂಡಾಗಳಲ್ಲಿ ದೀಪಾವಳಿಯ ಹಬ್ಬ ಸಂಭ್ರಮ ಮನೆ ಮಾಡಿರುತ್ತೆ.

ದೀಪಾವಳಿಯ ಮರು ದಿನದಿಂದ ಹಬ್ಬ

ದೀಪಾವಳಿಯ ಮರು ದಿನದಂದು ಯುವತಿಯರು ಬೆಳಿಗ್ಗೆಯೇ ಕಾಡು ಜಾತಿಯ ವಿವಿಧ ಹೂಗಳನ್ನ ತಂದು ಪರಸ್ಪರ ನೀಡಿ ಶುಭಾಶಯ ಕೋರುವರು.
ಕಾಡು ಜಾತಿಯ ವಿವಿಧ ಹೂಗಳನ್ನ ತಂದ ಬಳಿಕ ಲಂಬಾಣಿ ಹಾಡುಗಳನ್ನು ಹಾಡುತ್ತ ತಾಂಡಾದ ಮನೆಗಳಿಗೆ ತೆರಳಿ ಸೆಗಣಿಯ ಮೇಲೆ ಬಗೆ ಬಗೆಯ ಹೂಗಳನ್ನು ಹಾಕಿ ಅಲಂಕಾರ ಮಾಡಿದರು.

ತಾಂಡಾದ ದೇವಸ್ಥಾನದ ಬಳಿ

ಇದಾದ ಬಳಿಕ ತಾಂಡಾದ ದೇವಸ್ಥಾನದ ಬಳಿ ತೆರಳಿದರು. ಬಣ್ಣ ಬಣ್ಣದ ಉಡುಗೆ ತೊಟ್ಟಿದ್ದ ಯುವತಿಯರು ತಮಟೆ ತಾಳಕ್ಕೆ ಅನುಣವಾಗಿ ನೃತ್ಯ ಮಾಡುವುದು ನೋಡುಗರಲ್ಲಿ ಸಂಭ್ರಮ ಉಂಟು ಮಾಡುವುದು. ಬೆಳಿಗ್ಗೆಯಿಂದ ಸಂಜೆವರೆಗೆ ಯುವತಿಯರು ನೃತ್ಯ ಮಾಡಿ ಸಂತಸ ಪಡುತ್ತಾರೆ.

ಮನೆಗಳಿಗೆ ತೆರಳಿ ದೀಪ ಹಚ್ಚುತ್ತಾರೆ

ದೀಪಾವಳಿ ಆರಂಭಕ್ಕೂ 15 ದಿನಗಳ ಮುಂಚೆಯೇ ದಿನಾಲೂ ಸಂಜೆ ಲಂಬಾಣಿ ಯುವತಿ ಯುವತಿಯ ದೇವಸ್ಥಾನದ ಬಳಿ ನೃತ್ಯ ಮಾಡುತ್ತಾರೆ. ಬೆಳಕಿನ ಹಬ್ಬ ದೀಪಾವಳಿಯ ದಿನ ತಾಂಡಾದ ಮನೆಗಳಿಗೆ ತೆರಳಿ ದೀಪ ಹಚ್ಚುತ್ತಾರೆ.

ಲಂಬಾಣಿಗಳ ವಿಶೇಷ ಹಬ್ಬ

ಮರುದಿನದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ತಮಟೆ ನಾದಕ್ಕೆ ತಕ್ಕಂತೆ ಲಂಬಾಣಿ ಶೈಲಿಯ ನೃತ್ಯ ಮಾಡಿ ಹಬ್ಬ ಆಚರಿಸುತ್ತಾರೆ. ಇದು ಅನಾದಿಕಾಲದಿಂದಲೂ ಲಂಬಾಣಿಗರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ. ದೀಪಾವಳಿವೆಂದರೆ ಉಳಿದ ಹಬ್ಬಗಳಂತೆ ಅಲ್ಲ, ಲಂಬಾಣಿ ಸಮುದಾಯದವರಿಗದು ವಿಶೇಷ ಹಬ್ಬ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು