ಮುಂಬಯಿ(9/10/2020): ಯುದ್ಧ ವಿಮಾನಗಳಿಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ನೀಡುತ್ತಿದ್ದ ಆರೋಪದಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ.ನ ಸಿಬ್ಬಂದಿಯನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ ಪೊಲೀಸರು ಬಂಧಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕ್ ಗೆ ಮಾಹಿತಿಯನ್ನು ನೀಡಿ ಬಂಧನಕ್ಕೊಳಗಾಗಿರುವ ವ್ಯಕ್ತಿಯನ್ನು ದೀಪಕ್ ಶಿರ್ಸಾತ್ ಎಂದು ಗುರುತಿಸಲಾಗಿದ್ದು, ಈತ ಭಾರತದ ಯುದ್ಧ ವಿಮಾನಗಳು ಮತ್ತು ಅವುಗಳ ನಿರ್ಮಾಣ ಘಟಕಗಳ ಮಾಹಿತಿಯನ್ನು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಐಎಸ್ಐಗೆ ನೀಡುತ್ತಿದ್ದ ಎಂದು ವರದಿಯಾಗಿದೆ.