ಕುವೈತ್: ಅಮೇರಿಕಾ ಸೈನಿಕನಿಗೆ ಮರಣದಂಡನೆ ವಿಧಿಸಿ ಸರ್ವೋಚ್ಚ ನ್ಯಾಯಾಲಯದ ತೀರ್ಪು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕುವೈತ್ ಸಿಟಿ(25-10-2020): ಮಾದಕದ್ರವ್ಯ ಕಳ್ಳಸಾಗಣೆ ಮೊದಲಾದ ಅಪರಾಧಗಳಿಗಾಗಿ ಬಂಧಿತನಾದ್ದ ಅಮೇರಿಕಾ ಸೈನಿಕನಿಗೆ ಗಲ್ಲು ಶಿಕ್ಷೆ ವಿಧಿಸಿ ಕುವೈತಿನ ಸರ್ವೋಚ್ಚ ಕ್ರಿಮಿನಲ್ ನ್ಯಾಯಾಲಯವು ತೀರ್ಪು ನೀಡಿದೆ. ಇದಕ್ಕೂ ಮೊದಲೇ ಅಧೀನ ನ್ಯಾಯಾಲಯ ಇದೇ ತೀರ್ಪನ್ನು ವಿಧಿಸಿತ್ತು. ಈಗ ಸರ್ವೋಚ್ಚ ನ್ಯಾಯಾಲಯ ಅದನ್ನೇ ಎತ್ತಿ ಹಿಡಿದಿದೆ.

2018 ರ ಅಗಸ್ಟ್ ತಿಂಗಳಿನಲ್ಲಿ ಅಮೇರಿಕಾ ಸೈನಿಕ ಎರಿಕನನ್ನು ಕುವೈತ್ ಮಾದಕ ದ್ರವ್ಯ ವಿರೋಧಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದರು. ವೇಷ ಬದಲಿಸಿ ಬಂದ ತನಿಖಾ ಅಧಿಕಾರಿಗೆ ಸೈನಿಕನು ಮಾದಕದ್ರವ್ಯವನ್ನು ಮಾರಾಟ ಮಾಡಿದಾಗ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಸಾಲ್ಮಿಯದಲ್ಲಿರುವ ಈತನ ನಿವಾಸವನ್ನು ಪರಿಶೀಲನೆ ನಡೆಸಿದಾಗ ಹಾಶೀಶ್, ಕೊಕೇನ್ ಮುಂತಾದ ಮಾದಕದ್ರವ್ಯಗಳು, ಬಂಗಾರದ ಬಿಸ್ಕತ್ತುಗಳು, ಬೆಲೆಬಾಳುವ ಗಡಿಯಾರಗಳು, 2.70 ಲಕ್ಷ ಕುವೈತ್ ದೀನಾರುಗಳು, 49000 ಫಿಲಿಪೈನ್ಸ್ ಪೆಸೋ ಒಳಗೊಂಡ ದೊಡ್ಡ ಮೊತ್ತದ ಕಪ್ಪು ಹಣ ದೊರೆತಿತ್ತು.

ಅಮೇರಿಕಾದಿಂದ ತಂದ ಮಾದಕವಸ್ತುಗಳನ್ನು ಕುವೈತಿನಲ್ಲಿ ಮಾರಾಟ ಮಾರಿ, ಬಂಗಾರ ಮತ್ತು ಹಣವನ್ನು ಶೇಖರಿಸಿರುವುದಾಗಿ ಆತ ತನಿಖೆಯ ವೇಳೆ ಒಪ್ಪಿಕೊಂಡಿದ್ದ. ಅಮೇರಿಕಾ ಸೇನೆಯ ಕಾರ್ಗೋ ವಿಮಾನಗಳು ಮತ್ತಿತರ ಕಾರ್ಗೋಗಳನ್ನು, ಕಳ್ಳ ಸಾಗಾಣಿಕೆ ಮಾಡಲು ಬಳಸಿರುವುದಾಗಿಯೂ ತನಿಖೆಯಿಂದ ತಿಳಿದುಬಂದಿದೆ. ಮಾದಕದ್ರವ್ಯ ಕಳ್ಳಸಾಗಾಣಿಕೆ, ತೆರಿಗೆ ಪಾವತಿ ಮಾಡದೇ ದೇಶದೊಳಗೆ ಸರಕು ಆಮದು ಮಾಡಿಕೊಂಡಿರುವುದು ಇತ್ಯಾದಿ ಅಪರಾಧಗಳನ್ನು ಮಾಡಿರುವುದು ಸಾಬೀತಾಗಿದೆ. ಜೊತೆಗೆ ಹಲವು ಆರ್ಥಿಕ ವಂಚನೆ ಪ್ರಕರಣಗಳೂ ದಾಖಲಾಗಿದೆ.

ಪ್ರಾಥಮಿಕ ನ್ಯಾಯಾಲಯದಲ್ಲಿ ಅಮೇರಿಕಾ ಸೈನಿಕನು ತನ್ನ ಮೇಲಿನ ಆರೋಪಗಳನ್ನು ನಿಷೇಧಿಸಿದರೂ ಕೂಡಾ ಬಲವಾದ ಸಾಕ್ಷಿಗಳ ಆಧಾರದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ, ತೀರ್ಪು ನೀಡಿತ್ತು‌. ಇದೇ ತೀರ್ಪನ್ನು ಕ್ರಿಮಿನಲ್ ಅಪೀಲ್ ನ್ಯಾಯಾಲಯವೂ, ಇದೀಗ ಸರ್ವೋಚ್ಛ ನ್ಯಾಯಾಲಯವೂ ಎತ್ತಿಹಿಡಿಯಿತು.

ಇನ್ನು ಪ್ರಾಸಿಕ್ಯೂಷನ್ ಮರಣದಂಡನೆ ವಿಧಿಸುವ ಕೋರಿಕೆಯನ್ನು ಕುವೈತಿನ ಅಮೀರೀ ದಿವಾನಿಗೆ ಸಲ್ಲಿಸುತ್ತೆ. ಅಮೀರಿ ದಿವಾನಿನ ಅನುಮತಿ ಸಿಕ್ಕಿದ ಬಳಿಕವೇ ಕುವೈತಿನ ಕಾನೂನಿನಂತೆ ಮರಣದಂಡನೆ ವಿಧಿಸಲಾಗುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು