ಶಾಲಾ ಆವರಣದ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ದುರ್ಮರಣ

death
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹಾವೇರಿ(24/10/2020): ಶಾಲಾ ಆವರಣದಲ್ಲಿದ್ದ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿನ ಶಾಲಾ ಆವರಣದಲ್ಲಿ ಕಾಮಗಾರಿ ಸಲುವಾಗಿ ಹೊಂಡವೊಂದನ್ನು ತೋಡಗಾಲಿತ್ತು. ಇಂತಹ ಶಾಲಾ ಆವರಣದಲ್ಲಿ 7-8 ಮಕ್ಕಳು ಆಟವಾಡುತ್ತಿದ್ದವು. ಈ ವೇಳೆ ಹೊಂಡಕ್ಕೆ ಬಿದ್ದ ಮಕ್ಕಳು ಧಾರುಣವಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಈಗಾಗಲೇ ಮೂವರು ಮಕ್ಕಳ ಶವಗಳನ್ನು ಹೊಂಡದಿಂದ ಹೊರ ತೆಗೆಯಲಾಗಿದ್ದು, ಇನ್ನೂ 3-4 ಮಕ್ಕಳು ಹೊಂಡದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು