ಒಂದೇ ಮನೆಯ ಮೂವರ ಮೃತದೇಹ ಹೊಳೆಯಲ್ಲಿ ಪತ್ತೆ!  

death
Share on facebook
Share on twitter
Share on linkedin
Share on whatsapp
Share on telegram
Share on email
Share on print

ಯಲ್ಲಾಪುರ(23-11-2020): ನಾಪತ್ತೆಯಾಗಿದ್ದ ಒಂದೇ ಮನೆಯ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಿತ್ಲಳ್ಳಿ ಗ್ರಾಮ‌ಪಂಚಾಯಿತಿ ವ್ಯಾಪ್ತಿಯ ಕಲಗೋಡ್ಲುವಿನಲ್ಲಿ ನಡೆದಿದೆ.

ಗಣೇಶ್ ಪಾಲ್ ಹೊಳೆಯಲ್ಲಿ ರಾಜೇಶ್ವರಿ ನಾರಾಯಣ ಹೆಗಡೆ ವಾಣಿ ಪ್ರಕಾಶ್.ವೈ ಹಾಗೂ ಪುಟ್ಟ ಮಗುವಿನ ಮೃತದೇಹ ಪತ್ತೆಯಾಗಿದೆ.

ಈ ಮೂವರೂ ನ.20ರಂದು ಮನೆಯಿಂದ ಕಾಣೆಯಾಗಿದ್ದರು. ಹುಡುಕಾಟದ ಬಳಿಕ ಮನೆಮಂದಿ ನಿನ್ನೆ ಯಲ್ಲಾಪುರ‌ ಪೊಲೀಸರಿಗೆ ದೂರು ನೀಡಿದ್ದರು.

ಇನ್ನು ಶಿವಮೊಗ್ಗದಲ್ಲಿ ವಾಣಿಯ ಪತಿ ಮನೆ ಇದೆ. ಅವರ ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಭಾನುವಾರ ನಿಗದಿ ಮಾಡಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಮೊದಲೇ ತಾಯಿ, ಮಗಳು ಮತ್ತು ಮೊಮ್ಮಗನ ಮೃತದೇಹ ಪತ್ತೆಯಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು