ಅಶ್ಲೀಲ ಸಂದೇಶ ನನ್ನ ಮೊಬೈಲ್ ನಿಂದ ಕಳುಹಿಸಿಲ್ಲ, ನಾನು ನಿದ್ದೆ ಮಾಡುತ್ತಿದ್ದೆ- ಗೋವಾ ಡಿಸಿಎಂ

dcm goa
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಣಜಿ(20-10-2020): ವಾಟ್ಸಾಪ್ ಗುಂಪಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿತ ಗೋವಾ ಉಪಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕಾವ್ಲೇಕರ್ ಅವರು ನನ್ನ ಫೋನ್ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಅವರ ಫೋನ್‌ನಿಂದ ಭಾನುವಾರ ಮಧ್ಯರಾತ್ರಿಯು ಅಶ್ಲೀಲ ಸಂದೇಶ ರವಾನೆಯಾಗಿತ್ತು.

ನಾನು ನಿದ್ದೆ ಮಾಡುತ್ತಿದ್ದಾಗ ಕ್ಲಿಪ್ ಅನ್ನು ನನ್ನ ಫೋನ್‌ನಿಂದ ವಾಟ್ಸಾಪ್ ಗ್ರೂಪ್‌ಗೆ ಕಳುಹಿಸಲಾಗಿದೆ ಎಂದು ಚಂದ್ರಕಾಂತ್ ಕಾವ್ಲೇಕರ್ ಸೈಬರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. “ಕೆಲವು ದುಷ್ಕರ್ಮಿಗಳು” ಅಶ್ಲೀಲ ವಿಷಯದ ವೀಡಿಯೊವನ್ನು “ಗೋವಾ ಗ್ರಾಮಗಳು” ಎಂಬ ವಾಟ್ಸಾಪ್ ಗುಂಪಿಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು.

ವೀಡಿಯೊವನ್ನು “ಕೆಲವು ಅಪರಾಧ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ನನ್ನ ಹೆಸರಿಗೆ ಮಸಿಬಲಿಯಲು ಕಳುಹಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಸಂದೇಶವನ್ನು ಕಳುಹಿಸಿದ ಸಮಯ, ನನ್ನ ಫೋನ್ ನನ್ನ ಬಳಿ ಇರಲಿಲ್ಲ. ನಾನು ಗಾಢವಾದ ನಿದ್ದೆ ಮಾಡುತ್ತಿದ್ದೆ. ನನ್ನ ಹೆಸರನ್ನು ಕೆಣಕಲು ಮತ್ತು ಸಾರ್ವಜನಿಕರ ಮುಂದೆ ನನ್ನ ಬಗ್ಗೆ ತಪ್ಪು ಸಂದೇಶವನ್ನು ಕಳುಹಿಸಲು ಈ ಕೃತ್ಯ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು