ಮದ್ರಸ ಬಳಿ ಮಲಗಿದ್ದಾತನ ಕತ್ತು ಸೀಳಿ ಕೊಲೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದಾವಣಗೆರೆ (24-12-2020):   ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ  ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆದಿದ್ದು, ಘಟನೆ ನಡೆದು 48 ಗಂಟೆಗಳೊಳಗೆ ಹೊನ್ನಾಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ನಜೀರ್ ಅಹ್ಮದ್ ಎಂಬವರು ಹತ್ಯೆಗೀಡಾದವರಾಗಿದ್ದಾರೆ.  ಗ್ರಾಮದ ಮದ್ರಸ ಬಳಿಯಲ್ಲಿ ಇವರನ್ನು  ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಡಿಸೆಂಬರ್ 20ರಂದು ಹತ್ಯೆಗೀಡಾದ ನಜೀರ್ ಅಹ್ಮದ್ ಅವರ ತಮ್ಮ ಮಹಮ್ಮದ್ ಜಿಕ್ರಿಯಾ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹನುಮಂತರಾತ ಐಪಿಎಸ್ ಹಾಗೂ ಚನ್ನಗಿರಿ ಪೊಲೀಸ್ ಉಪಾಧೀಕ್ಷಕರಾದ ಪ್ರಶಾಂತ್ ಜಿ. ಮುನ್ನೂಳಿ ಇವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ವಿ.ದೇವರಾಜ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು 48 ಗಂಟೆಗಳೊಳಗೆ ಬಂಧಿಸಲಾಗಿದೆ.

ಹುಣಸಗಟ್ಟ ಗ್ರಾಮದವರೆ ಆಗಿರುವ ಶೋಯೆಬ್ ಅಕ್ತರ್ , ಮುಮ್ತಾಕೀಂ ಬಂಧಿತ ಆರೋಪಿಗಳಾಗಿದ್ದಾರೆ.  ಬಂಧನದ ಬಳಿಕ ಪೊಲೀಸರು ಇವರನ್ನು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆಗೆ ಕಾರಣ ಏನು ಎಂದು ಬಾಯ್ಬಿಟ್ಟಿದ್ದಾರೆ.

ಇನ್ನೂ ಪ್ರಕರಣದಲ್ಲಿ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಮಹಮದ್ ಜಿಕ್ರಿಯಾ , ಮುಜಾಮಿಲ್ , ಮತ್ತು ಇಕ್ಬಾಲ್ ಎಂಬವರನ್ನೂ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 1.11000 ಸಾವಿರ ರೂ ನಗದು 1 ಚಾಕು,  2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

  • ಕೋಗಲೂರು ಕುಮಾರ್
Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು