ಅಪ್ರಾಪ್ತ ಬಾಲಕಿಯ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಮೂವರ ಬಂಧನ| ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು

inspecter
Share on facebook
Share on twitter
Share on linkedin
Share on whatsapp
Share on telegram
Share on email
Share on print

ದಾವಣಗೆರೆ(08-11-2020):  ಅಪ್ರಾಪ್ತ ಯುವತಿಯನ್ನು ಹೆದರಿಸಿ ಮೂರು ಜನ ಯುವಕರು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹೊನ್ನಾಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಮೊದಲನೆ ಆರೋಪಿಯಾದ ಹಾಲೇಶ್ ಎಂಬಾತನನ್ನು ಬಂದಿಸಿ ನ್ಯಾಯಲಯ ಬಂಧನಕ್ಕೆ ಒಪ್ಪಿಸಲಾಗಿದೆ.  ವಿಶೇಷವಾಗಿ ಈ ಪ್ರಕರಣದಲ್ಲಿ ಮೊದಲ ಆರೋಪಿಗೆ ಸಹಕರಿಸಿದ ಸ್ನೇಹಿತರಾದ ಚನ್ನಗಿರಿ ತಾಲೂಕಿನ ಹರೋಸಾಗರ ಗ್ರಾಮದ ಹಾಲೇಶ್, ಹೊನ್ನಾಳಿಯ ಕುಂದೂರು ಗ್ರಾಮದ ರುದ್ರೇಶ್ ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯಾದ ಹನುಮಂತಪ್ಪ ಎಂಬಾತ ತಲೆಮರೆಸಿಕೊಂಡಿರುತ್ತಾನೆ ಇವರುಗಳ ವಿರುದ್ದ ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಹನುಮಂತಪ್ಪ ಎಂಬುವವನ ಪತ್ತೆಗಾಗಿ ಪೋಲಿಸರು ಕಾರ್ಯಚರಣೆಯಲ್ಲಿದ್ದಾರೆ ಎಂದು ಹೊನ್ನಾಳಿ ವೃತ್ತ ನಿರೀಕ್ಷಕರಾದ ಟಿ,ವಿ, ದೇವರಾಜ್ ಮಾದ್ಯಮಕ್ಕೆ ತಿಳಿಸಿದ್ದಾರೆ.

ದಿನಾಂಕ 4 ರಂದು ಬುಧವಾರ ಬಾಲಕಿ ಕಾಣೆಯಾಗಿರುವ ಬಗ್ಗೆ ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತೆ. ತನಿಖೆ ಕೈಗೊಂಡು ಇವರುಗಳನ್ನು ವಿಚಾರಣೆ ನಡೆಸಿದ್ದೇವೆ. ಆದರೆ ಆರೋಪಿಗಳು ನಿಜವನ್ನು ಒಪ್ಪಿಕೊಂಡಿರುವುದಿಲ್ಲಾ. ಕಿಡ್ನ್ಯಾಪರ್ಸಗಳನ್ನು ಬಂಧಿಸಿದಾಗ ನೊಂದ ಸಂತ್ರಸ್ಥೆ ನಮ್ಮ ಮುಂದೆ ನಡೆದ ಸತ್ಯ ಸಂಗತಿಗಳನ್ನು  ಹೇಳಿದಾಗ ,ಹಾಲೇಶ್ , ರುದ್ರೇಶ್ .ಹಾಲೇಶ್, ಹನುಮಂತಪ್ಪ ಇವರುಗಳ ಮೇಲೆ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುತ್ತೇವೆ ಮತ್ತೊಬ್ಬ ಆರೋಪಿ ಹನುಮಂತಪ್ಪ ತಲೆಮರೆಸಿಕೊಂಡಿದ್ದು ಸದ್ಯದರಲ್ಲೆ ಪತ್ತೆ ಹಚ್ಚಿ ಬಂಧಸಲಾಗುವುದು ಎಂದು ಹೊನ್ನಾಳಿ ಪೋಲೀಸ್ ವೃತ್ತ ನಿರೀಕ್ಷಕ ಟಿ.ವಿ ದೇವರಾಜ್ ಹೇಳಿದ್ದಾರೆ.

ವರದಿ –ಕೋಗಲೂರು ಕುಮಾರ್

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು